ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸರ‌್ಯವತಿ ದೇವರಾಜ್ ಅವರನ್ನು ಮುಖಂಡರು ಅಭಿನಂದಿಸಿದರು. ಮುಖಂಡರಾದ ಪಾಲಾಕ್ಷ, ತಂಗಸ್ವಾಮಿ, ಜನಾರ್ಧನ್, ಶರತ್ ಶೇಖರ್, ಅಪ್ಪಸ್ವಾಮಿ ಇತರರು ಇದ್ದರು. 
ಜಿಲ್ಲೆ

ಸತ್ಯವತಿ ದೇವರಾಜ್ ದುಂಡಳ್ಳಿ ಗ್ರಾಪಂ ಅಧ್ಯಕ್ಷೆ

ಶನಿವಾರಸಂತೆ : ಸಮಿಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ 2ನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸತ್ಯವತಿ ದೇವರಾಜ್ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಗೋಪಿಕಾ ಅವಿರೋಧವಾಗಿ ಆಯ್ಕೆಯಾದರು.

ಗ್ರಾ.ಪಂ.ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನವಣೆಯಲ್ಲಿ ಉಪಾಧ್ಯಕ್ಷರ ಸ್ಥಾನಕ್ಕೆ ಗೋಪಿಕಾ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಗೋಪಿಕಾ ಅವರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.

ಅಧ್ಯಕ್ಷರ ಸ್ಥಾನಕ್ಕೆ ಪರಿಶಿಷ್ಠ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸತ್ಯವತಿ ದೇವರಾಜ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ಕಾಂತರಾಜ್ ನಾಮಪತ್ರ ಸಲ್ಲಿದ್ದರು. ಚುನಾವಣೆ ಪ್ರಕ್ರಿಯೆ ನಡೆದು ಸತ್ಯವತಿ ದೇವರಾಜ್ 8 ಹಾಗೂ ಕಾಂತರಾಜ್ 5 ಮತಗಳನ್ನು ಪಡೆದರು. 3 ಮತಗಳ ಅಂತದಲ್ಲಿ ಸತ್ಯಾವತಿ ದೇವರಾಜ್‌ಅಧ್ಯಕ್ಷರಾಗಿ ಆಯ್ಕೆಯಾದರು.

ಸೋಮವಾರಪೇಟೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬದಾಮಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಪಿಡಿಒ ರಾಜೇಂದ್ರ, ಕಾಂಗ್ರೆಸ್ ಪ್ರಮುಖರಾದ ಲೋಕೇಶ್, ಶರತ್ ಶೇಖರ್, ಎನ್.ಕೆ.ಅಪ್ಪಸ್ವಾಮಿ, ಸತೀಶ್, ಮಹಮ್ಮದ್ ಖನ್ನಾ, ಪುಟ್ಟಸ್ವಾಮಿ, ಆದಿಲ್ ಪಾಷ, ಜಿ.ಎಂ.ಕಾಂತರಾಜ್, ಆದಿತ್ಯ, ಪಾಲಾಕ್ಷ, ಜನಾರ್ಧನ್ ಮುಂತಾದವರು ಇದ್ದರು.