ಗೋಕಾಕ: ದೇಶದಲ್ಲಿರುವ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂ ಶ್ರಮಿಸುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂದ ವಕ್ತಾರ ಕಷ್ಣಾ ಜೋಶಿ ಹೇಳಿದರು.
ನಗರದ ಕೆಎಲ್ಇ ಸಿ.ಎಸ್. ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ವಿಜಯದಶಮಿ ಹಬ್ಬದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಪಥ ಸಂಚಲನ ಹಾಗೂ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಭಾರತ ಜಾಗತಿಕ ಮನ್ನಣೆ ಗಳಿಸುತ್ತಿದೆ. ಜಗತ್ತಿನ ಎಲ್ಲರೂ ಸುಖ ಶಾಂತಿಯಿಂದಿರಬೇಕು ಎಂಬುದು ಆರ್ಎಸ್ಎಸ್ ಉದ್ದೇಶ. 60 ಸಾವಿರ ಶಾಖೆಗಳ ಸ್ವಯಂ ಸೇವಕರು ದೇಶವನ್ನು ಶಿಸ್ತುಬದ್ಧವಾಗಿ ಸಂಟಿಸಿ ಹಿಂದು ಸಮಾಜ ನಿರ್ಮಾಣ ಮಾಡಲು ಕಾರ್ಯಪ್ರವತ್ತರಾಗಿದ್ದಾರೆ. ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಟನೆ ನಮ್ಮದು ಎಂದರು.
ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಲಾಯಿತು. ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಪಥಸಂಚಲನಕ್ಕೆ ಪುಷ್ಪವಷ್ಟಿ ಮಾಡಿ ಗೌರವ ಸಲ್ಲಿಸಿದರು. ನಗರದ ಅರ್ಬನ್ ಬ್ಯಾಂಕ್ ಅಧ್ಯ ಬಸವರಾಜ ಕಲ್ಯಾಣಶೆಟ್ಟಿ, ಸಂ ಸಂಚಾಲಕ ಎಂ.ಐ. ಹಾರೂಗೇರಿ, ಪ್ರಮುಖರಾದ ಎಂ.ಡಿ. ಚುನಮರಿ, ಗೋಪಾಲ ಖೆಮಲಾಪುರೆ ಇದ್ದರು.