ಜಿಲ್ಲೆ

ಶಾಂತಿ ಚಿತ್ರಮಂದಿರಕ್ಕೆ ನಟ ಯುವ ರಾಜ್‌ಕುಮಾರ್ ಭೇಟಿ

ಕೊಳ್ಳೇಗಾಲ: ಎಕ್ಕ ಸಿನಿಮಾ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಶಾಂತಿ ಚಿತ್ರಮಂದಿರಕ್ಕೆ ನಟ ಯುವ ರಾಜ್‌ಕುಮಾರ್ ಶನಿವಾರ ಭೇಟಿ ನೀಡಿದ್ದರು.

ಚಿತ್ರ ಮಂದಿರಕ್ಕೆ ನಟ ಯುವ ರಾಜ್‌ಕುಮಾರ್ ಆಗಮಿಸುತ್ತಿರುವ ಮಾಹಿತಿ ತಿಳಿದ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ದೌಡಾಯಿಸಿದ್ದರು. ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಂತೆ ಸುತ್ತುವರಿದ ಅಭಿಮಾನಿಗಳು ಅಪ್ಪು ಮತ್ತು ಯುವ ಎಂದು ಘೋಷಣೆ ಕೂಗಿದರು. ಕಾರನ್ನು ಸುತ್ತುವರಿದು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಈ ವೇಳೆ ನೂಕು ನುಗ್ಗಲು ಏರ್ಪಟ್ಟಿತ್ತು. ಬಳಿಕ ನಟ ಯುವ ಕಾರಿನ ಮೇಲೆ ಕುಳಿತು ಅಭಿಮಾನಿಗಳತ್ತ ಕೈ ಬೀಸಿದರು. ಇದಕ್ಕೂ ಮೊದಲು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಚಾಮರಾಜನಗರಕ್ಕೆ ತೆರಳಿದರು.

ಶಿವರಾಜ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಪ್ರಭು, ಅಪ್ಪು ಟೀಮ್ ರಾಜೇಶ್, ಶಾಂತಿ ಟಾಕೀಸ್ ಪಾಪಣ್ಣ, ಶ್ರೀಧರ್ ಮತ್ತಿತರಿದ್ದರು.