ತಿಪಟೂರು: ಕೋಮು ಪ್ರಚೋದನಕಾರಿ ಪೋಸ್ಟರ್ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ ವ್ಯಕ್ತಿಯನ್ನು ನಗರಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ನಗರದ ಗಾಂಧೀನಗರ ನಿವಾಸಿ ಉಮರ್ಫಾರುಕ್ (41) ಬಂಧಿತ. ಈತ ಲಾರಿ ಚಾಲಕನಾಗಿದ್ದು, ಫೇಸ್ಬುಕ್ನಲ್ಲಿ ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕುವುದು, ಅನ್ಯ ಧರ್ಮಗಳ ಬಗ್ಗೆ ವಿರೋಧಿ ಗ್ರೂಪ್ಗಳನ್ನು ರಚನೆ ಮಾಡುತ್ತಿರುವುದನ್ನು ಗಮನಿಸಿದ ನಗರಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.