ಶಹಾಬಾದ್‌ನಲ್ಲಿ ಶ್ರೀ ಬಸವ ರೈತ ಸಂಘದಿAದ ಆಯೋಜಿಸಿದ್ದ ಉತ್ತರಿ ಮಳೆ ಪೂಜೆಗೆ ಆಗಮಿಸಿದ ಶಾಸಕ ಬಸವರಾಜ ಮತ್ತಿಮಡು ಅವರನ್ನು ಎತ್ತಿನ ಬಂಡಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. 
ಜಿಲ್ಲೆ

ಶಹಾಬಾದ್‌ನಲ್ಲಿ ಉತ್ತರಿ ಮಳೆ ಪೂಜೆ

ಶಹಾಬಾದ್: ನಗರದಲ್ಲಿ ಶ್ರೀ ಬಸವ ರೈತ ಸಂಘದಿAದ ಉತ್ತರಿ ಮಳೆ ಪೂಜೆ ಸಂಭ್ರಮದಿAದ ನಡೆಯಿತು. ವಿವಿಧ ದೇವಸ್ಥಾನ, ದರ್ಗಾಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಯಾಗಲಿ ಎಂದು ರೈತರು ಬೇಡಿಕೊಂಡರು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ ಶಾಸಕ ಬಸವರಾಜ ಮತ್ತಿಮಡು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿತು. ಬಸವೇಶ್ವರ ವೃತ್ತದ ಬಳಿ ಅಲಂಕೃತ ಎತ್ತಿನ ಬಂಡಿಯಲ್ಲಿ ಶಾಸಕರನ್ನು ಕೂರಿಸಿ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಬಸವೇಶ್ವರ ಮೂರ್ತಿ ಸೇರಿ ವಿವಿಧ ಗಣ್ಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು. ಜೇವರ್ಗಿ ರಸ್ತೆಯಲ್ಲಿರುವ ದಾದೇ ಪೀರ್ ದರ್ಗಾದವರಿಗೂ ಮೆರವಣಿಗೆ ಜರುಗಿತು.

ದಾದೇ ಪೀರ್ ದರ್ಗಾದಲ್ಲಿ ಶಹಾಬಾದ್, ತೊನಸನಳ್ಳಿ (ಎಸ್) ಗ್ರಾಮದ ರೈತರು ಕೂರಿಗೆ ಪೂಜೆ ಸಲ್ಲಿಸಿ, ವಿಶೇಷ ಪ್ರಾರ್ಥನೆ ಮಾಡಿದರು. ನಂತರ ರೈತರು ಮೌಖಿಕವಾಗಿ ಶಾಸಕರ ಮುಂದೆ ತಮ್ಮ ಸಮಸ್ಯೆ ಹೇಳಿಕೊಂಡದರು.

ಸAಘದ ಅಧ್ಯಕ್ಷ ತಿರುಮಲ ದೇವಕರ, ಪ್ರಧಾನ ಕಾರ್ಯದರ್ಶಿ ಸದಾನಂದ ಕುಂಬಾರ, ಪ್ರಮುಖರಾದ ಮಹೇಶ ಯಲ್ಲೇರಿ, ಸಿದ್ದಪ್ಪ ಸುಬೇದಾರ್, ನಬೀ ಸಾಬ್, ದುರ್ಗಪ್ಪ, ಮಹ್ಮದ್ ಹಳ್ಳಿ, ನಾಗೂ ಕೊಡದೂರ, ದುರ್ಗಪ್ಪ, ನಿಂಗಣ್ಣ ಹುಳಗೋಳ, ಅಣವೀರ ಇಂಗಿನಶೆಟ್ಟಿ, ಬಸವರಾಜ ಬಿರಾದಾರ, ಸಿದ್ರಾಮ ಕುಸಾಳೆ, ಚಂದ್ರಕಾAತ ಗೊಬ್ಬುರಕರ್, ಭೀಮರಾವ ಸಾಳೊಂಕೆ, ಅರುಣ ಪಟ್ಟಣಕರ್, ಜಯಶ್ರೀ ಸೂಡಿ, ಶಶಿಕಲಾ ಇತರರಿದ್ದರು.