ಶಹಾಬಾದ್‌ನಿಂದ ಜೇವರ್ಗಿ ಕ್ರಾಸ್‌ವರೆಗಿನ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಶಹಾಬಾದ್‌ನ ಕನಕದಾಸ ವೃತ್ತದಲ್ಲಿ ತೊನಸನಳ್ಳಿ (ಎಸ್) ಗ್ರಾಮಸ್ಥರು ಪ್ರತಿಭಟನೆ ನಡೆಸಿ ಲೋಕೋಪಯೋಗಿ ಇಲಾಖೆ ಇಇ ಪ್ರಭಯ್ಯ ಮಠಪತಿ ಅವರಿಗೆ ಮನವಿ ಸಲ್ಲಿಸಿದರು. ವಿರೇಶ ರಾಮಶೆಟ್ಟಿ, ಮರೆಪ್ಪ ಕಡೆಹಳ್ಳಿ, ಬಸವರಾಜ ಮದ್ರಕಿ ಇತರರಿದ್ದರು. 
ಜಿಲ್ಲೆ

ಶಹಾಬಾದ್-ಜೇವರ್ಗಿ ಕ್ರಾಸ್ ರಸ್ತೆ ದುರಸ್ತಿ ಮಾಡಿ

ಶಹಾಬಾದ್: ಸಂಪೂರ್ಣ ಹದಗೆಟ್ಟಿರುವ ಶಹಾಬಾದ್- ಜೇವರ್ಗಿ ಕ್ರಾಸ್‌ವರೆಗಿನ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ತೊನಸನಳ್ಳಿ (ಎಸ್) ಗ್ರಾಮಸ್ಥರು ಕನಕದಾಸ ವೃತ್ತದಲ್ಲಿ ಸಂಚಾರ ತಡೆದು ಭಾನುವಾರ ಧರಣಿ ನಡೆಸಿದರು.

ಪ್ರಮುಖರು ಮಾತನಾಡಿ, ಸುಮಾರು ೧೧ ಕಿಮೀ ರಸ್ತೆ ಇದಾಗಿದ್ದು, ಮಾರುದ್ದ ತಗ್ಗುಗಳು ಬಿದ್ದಿವೆ. ಸುಗಮ ಸಂಚಾರಕ್ಕೆ ಸಂಚಕಾರ ಬಿದ್ದಿವೆ. ದ್ವಿಚಕ್ರ ವಾಹನಗಳು ತಿರುಗಾಡಲು ಆಗದಂತ ಸ್ಥಿತಿಯಿದೆ. ದೊಡ್ಡ ವಾಹನ ಸವಾರರ ಕಷ್ಟಗಳು ಹೇಳತೀರದಾಗಿದೆ. ಸಂಬAಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಹೀಗಾಗಿ ಹೋರಾಟದ ಹಾದಿ ತುಳಿದಿz್ದೆÃವೆ. ಹೊಸ ರಸ್ತೆ ನಿರ್ಮಾಣ ಮಾಡಲು ಆಗದಿದ್ದರೆ ಕನಿಷ್ಠ ತಗ್ಗುಗಳಿಗೆ ಮರುಮ್ ಹಾಕುವ ಕೆಲಸವಾದರೂ ಮಾಡಿ ಎಂದು ಆಗ್ರಹಿಸಿದರು.

ಲೋಕೋಪಯೋಗಿ ಇಲಾಖೆ ಪ್ರಭಾರಿ ಇಇ ಪ್ರಭಯ್ಯ ಮಠಪತಿ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದ ಅವರು, ಈಗಾಗಲೇ ಶಾಸಕ ಎಂ.ವೈ.ಪಾಟೀಲ್, ಬಸವರಾಜ ಮತ್ತಿಮಡು ಅವರು ಕಲ್ಯಾಣ ಕರ್ನಾಟಕ ಅಭಿವೃದ್ದಿ ನಿಗಮದಿಂದ ಜಿಲ್ಲಾಧಿಕಾರಿಗಳಿಗೆ ಬಜೆಟ್ ಕೇಳಿದ್ದಾರೆ. ಶಾಸಕರು ಕೇಳಿದಷ್ಟು ಕೆಕೆಆರ್‌ಡಿಬಿ ಗ್ರಾö್ಯಂಟ್ ಕೊಟ್ಟರೆ ಮಾತ್ರ ರಸ್ತೆ ನಿರ್ಮಿಸಲು ಸಾಧ್ಯ ಸ್ಪಷ್ಟಪಡಿಸಿದರು.

ಪ್ರತಿಭಟನಾಕಾರರು ಒಮ್ಮೆ ಹದಗೆಟ್ಟ ರಸ್ತೆ ನೋಡಿ ಎಂದು ಅಧಿಕಾರಿಗಳ ಎದುರು ಪಟ್ಟು ಹಿಡಿದರು. ಇದರಿಂದ ಕೆಲ ಕಾಲ ವಿಚಲೀತರಾದ ಆಫಿಸರ್ಸ್, ಮುಖ ಪ್ರೇಕ್ಷಕರಂತೆ ನಿಂತರು. ಬಳಿಕ ಪಿಐ ನಟರಾಜ ಲಾಡೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಜೇವರ್ಗಿ ರಸ್ತೆಯ ಮೂಲಕ ಕಾರಿನಲ್ಲಿ ಹೋಗುವಂತೆ ಸಲಹೆ ನೀಡಿ ಕಳಿಸಿದರು. ಪಿಎಸ್‌ಐ ಚಂದ್ರಕಾAತ ಮೆಕಾಲೆ ಅವರನ್ನು ಪ್ರತಿಭಟನಾಕಾರರೊಂದಿಗೆ ಕಳಿಸಿ ವಾತಾವರಣ ತಿಳಿಗೊಳಿಸಿದರು.

ಪ್ರಮುಖರಾದ ವಿರೇಶ ರಾಮಶೆಟ್ಟಿ, ಮರೆಪ್ಪ ಕಡೆಹಳ್ಳಿ, ಮಲ್ಲಿಕಾರ್ಜುನ ಮರತೂರ, ಬಸವರಾಜ ಮದ್ರಕಿ, ಬಸವರಾಜ ಗೊಳೇದ, ಮಹಾಲಿಂಗಪ್ಪ ಧೋತ್ರೆ, ಸಿದ್ದರಾಮ ಪೂಜಾರಿ, ಬೆಳ್ಳೆಪ್ಪ ಖಣದಾಳ, ಶಿವಲಿಂಗಪ್ಪ ಗೊಳೇದ, ಮಹಾದೇವಪ್ಪ ಬಂದಳ್ಳಿ, ಸಿದ್ದು ಸಾಹು, ನಿಂಗಣ್ಣಗೌಡ ಮಾಲಿ ಪಾಟೀಲ್, ಶ್ರೀಶೈಲ ರಾಮಶೆಟ್ಟಿ, ಸಂಗಣ್ಣ ರಾಮಶೆಟ್ಟಿ ಇತರರಿದ್ದರು.

ಪಿಎಸ್‌ಐ ಸಾತಲಿಂಗಪ್ಪ ಸಗರ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಧರಣಿಯಿಂದಾಗಿ ಶಹಾಬಾದ್, ಜೇವರ್ಗಿ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಾಲಾಗಿ ನಿಂತಿದ್ದವು.