ಜಿಲ್ಲೆ

ಶಹಾಬಾದ್, ಕಮಲಾಪುರದಲ್ಲಿ ರೈಲು ನಿಲುಗಡೆಗೆ ಒಪ್ಪಿಗೆ

ಕಲಬುರಗಿ: ಶಹಾಬಾದ್ ರೈಲ್ವೆ ನಿಲ್ದಾಣದಲ್ಲಿ ಬಹುದಿನಗಳಿಂದ ಬೇಡಿಕೆಯಾಗಿದ್ದ ಮುಂಬೈ ಮೇಲ್ ಎಕ್ಸ್ಪ್ರೆಸ್ ರೈಲು ಮತ್ತು ಕಮಲಾಪುರ ರೈಲ್ವೆ ನಿಲ್ದಾಣದಲ್ಲಿ ಸೋಲಾಪುರ ತಿರುಪತಿ ವಿಶೇಷ ರೈಲು ನಿಲುಗಡೆಗೆ ಕೇಂದ್ರ ರೈಲ್ವೆ ಇಲಾಖೆಯಿಂದ ಒಪ್ಪಿಗೆ ನೀಡಿದೆ. ಶಹಾಬಾದ್ ತಾಲೂಕಿನ ಜನರ ಬಹುದಿನಗಳ ಬೇಡಿಕೆ ಈಡೇರಿದ್ದು, ಕಮಲಾಪುರ ರೈಲು ನಿಲ್ದಾಣದಲ್ಲಿ ತಿರುಪತಿ ರೈಲು ನಿಲ್ದಾಣದಿಂದ ಈ ಭಾಗದ ಜನರಿಗೆ ತಿರುಪತಿಗೆ ಹೋಗಲು ಅನುಕೂಲವಾಗಲಿದೆ ಎಂದು ಸಂಸದ ಡಾ.ಉಮೇಶ ಜಾಧವ್ ತಿಳಿಸಿದ್ದಾರೆ.