ಜಿಲ್ಲೆ

ಶಹಾಬಾದನಲ್ಲಿ ಅಂಗನವಾಡಿ ನೌಕರರ ಪ್ರತಿಭಟನೆ

ಶಹಾಬಾದ್​: ಅಂಗನವಾಡಿ ಕೇಂದ್ರಗಳ 19 ತಿಂಗಳ ಬಾಡಿಗೆ ನೀಡಬೇಕು. ತರಕಾರಿ, ಸಿಲಿಂಡರ್ ಬಿಲ್ ಪಾವತಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಶಹಾಬಾದನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಭೀಮರಾವ ಹೊಸಮನಿಗೆ ಮನವಿಪತ್ರ ಸಲ್ಲಿಸಲಾಯಿತು.

ಸಾಬಣ್ಣ ಗುಡುಬಾ, ಸಾಬಮ್ಮ ಕಾಳಗಿ, ಮೀನಾಕ್ಷಿ, ಮೈತ್ರಾಬಾಯಿ, ಅಂಬುಜಾ ಅಂತಪಳ್ಳಿ, ಸುಜಾತಾ ಬಸಪಟ್ಟಣ, ಲಕ್ಷಿö್ಮÃ ಜಾಧವ್, ರಾಯಪ್ಪ ಹುರುಮುಂಜಿ, ಲಕ್ಷಿö್ಮÃ ರಾಡಿಪಟ್ಟಿ, ಲಕ್ಷಿö್ಮÃ ಆರ್. ಇತರರಿದ್ದರು.