ಶಹಾಪುರ: ಸರ್ಕಾರ ಭಾನುವಾರ ಸಂಪೂರ್ಣ ಲಾಕ್ಡೌನ್ ಮಾಡುವಂತೆ ಆದೇಶ ಹೊರಡಿಸಿದ ಹಿನ್ನೆಲೆ ನಗರದಲ್ಲಿ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು.
ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳನ್ನು ಹೊರತುಪಡಿಸಿ ಎಲ್ಲ ಮಳಿಗೆಗಳ ಬಾಗಿಲುಗಳನ್ನು ಬಂದ್ ಮಾಡಲಾಗಿತ್ತು. ಇಷ್ಟು ದಿನ ಲಾಕ್ಡೌನ್ ಸಡಲಿಕೆಯಾಗಿದ್ದರಿಂದ ಜನತೆ ಕೊಂಚ ನಿರಾಳರಾಗಿ ಸಂಚರಿಸುತ್ತಿದ್ದರು. ಆದರೆ ಭಾನುವಾರ ಕರ್ಫ್ಯೂ ನಿಂದ ಮನೆಬಿಟ್ಟು ಹೊರಗಡೆ ಬರಲಿಲ್ಲ. ಇಲ್ಲಿನ ಬಸವೇಶ್ವರ ವೃತ್ತ, ಹೊಸ ಬಸ್ನಿಲ್ದಾಣ, ದಿಗ್ಗಿಬೇಸ್ ಸೇರಿ ಪ್ರಮುಖ ರಸ್ತೆಗಳು ಜನರಿಲ್ಲದೆ ಭಣಗುಡುತ್ತಿದ್ದವು.
ಅನಗತ್ಯವಾಗಿ ರಸ್ತೆಗಳಿದ ಜನತೆಗೆ ಪೊಲೀಸರು ಬಿಸಿ ಮುಟ್ಟಿಸಿದ ಘಟನೆಗಳೂ ನಡೆದವು. ರಂಜಾನ್ ಹಬ್ಬದ ನಿಮಿತ್ತ ಶಹಾಪುರದಲ್ಲಿ ಸಾಮಾನ್ಯವಾಗಿ ಜನಸಂದಣಿ ಇರುತ್ತಿತ್ತು. ಆದರೆ ಭಾನುವಾರ ಮಾತ್ರ ಇಡೀ ನಗರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.