ಕಂಪ್ಲಿ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ತರಬೇತಿ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಬಿಕಾಂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
ಪ್ರಾಚಾರ್ಯೆ ಡಾ.ಅನ್ನಪೂರ್ಣ ಗುಡದೂರು ಅಧ್ಯಕ್ಷತೆವಹಿಸಿ ಮಾತನಾಡಿ, ಭವಿಷ್ಯ ರೂಪಿಸುವಲ್ಲಿ ಪದವಿ ಅಂಕಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಉನ್ನತ ಕನಸನ್ನು ಕಾಣಬೇಕು. ಅದನ್ನು ನನಸು ಮಾಡಲು ಸತತ ಪ್ರಯತ್ನಿಸಬೇಕು ಎಂದರು.
ಪ್ರಮುಖರಾದ ಕೆ.ಎಸ್.ಚಾಂದ್‌ಬಾಷ, ಕೆ.ಷಣ್ಮುಖಪ್ಪ, ಕೆ.ಮಸ್ತಾನ್‌ಸಾಬ್, ಲಡ್ಡು ಹೊನ್ನೂರವಲಿ, ಅಕ್ಕಿ ಜಿಲಾನ್, ಟಿ.ಜಾಫರ್, ಸಹಾಯಕ ಪ್ರಾಧ್ಯಾಪಕರಾದ ಚಂದ್ರಶೇಖರ್, ರಾಜ್ಮಾ ಟಿ.ಎಂ.ಆರ್, ಜಿ.ಎಂ.ಮಮತಾ, ಗ್ರಂಥಪಾಲಕ ಎ.ಜಿ.ವೀರಭದ್ರಪ್ಪ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶರಣು, ಸಿಡಿಸಿ ಸಮಿತಿ ಸದಸ್ಯರು, ಅತಿಥಿ ಉಪನ್ಯಾಸಕರು ಇತರರಿದ್ದರು.