ಮಾದೀಹಳ್ಳಿ ಹೋಬಳಿ ರಂಗನ ಕೊಪ್ಪಲು ಗ್ರಾಮದ ಮೃತ ಕೃಷ್ಣಮೂರ್ತಿ ಕುಟುಂಬದವರು ಹಾಗೂ ಜಮೀನಿನ ಖಾತೆದಾರ ಭಾಗ್ಯ ರಾಜೇಶ್ ಎಂಬುವರ ನಡುವೆ ವಾಗ್ವಾದ ನಡೆದಿದ್ದು ಉಪತಹಸೀಲ್ದಾರ್ ಗಂಗಾದರ್ ಮನವೊಲಿಸಿದರು. 
ಜಿಲ್ಲೆ

ಶವ ಸಂಸ್ಕಾರಕ್ಕಾಗಿ ಜಟಾಪಟಿ

ಹಗರೆ: ಶವ ಸಂಸ್ಕಾರ ಸಂಬಂಧ ಕುಟುಂಬದವರು ಹಾಗೂ ಜಮೀನಿನ ಖಾತೆದಾರನ ನಡುವೆ ಜಟಾಪಟಿ ನಡೆದಿದ್ದು ಕೊನೆಗೆ ಉಪತಹಸೀಲ್ದಾರ್ ಮಧ್ಯಸ್ಥಿಕೆಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

ಮಾದಿಹಳ್ಳಿ ಹೋಬಳಿಯ ರಂಗನಕೊಪ್ಪಲು ಗ್ರಾಮದ ಕೃಷ್ಣಮೂರ್ತಿ(66) ಎಂಬುವರು ಭಾನುವಾರ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಸೋಮವಾರ ಕುಟುಂಬದವರು ಅಂತ್ಯಕ್ರಿಯೆ ನಡೆಸಲು ತಾವು ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಗುಂಡಿ ತೆಗೆಯಲು ಹೋದಾಗ ಜಮೀನಿನ ಖಾತೆದಾರರಾದ ಭಾಗ್ಯ ರಾಜೇಶ್ ತಡೆದಿದ್ದಾರೆ. ಇದರಿಂದ ಎರಡು ಕುಟುಂಬಗಳ ನಡುವೆ ಜಟಾಪಟಿ ಆರಂಭವಾಯಿತು.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಉಪತಹಸೀಲ್ದಾರ್ ಗಂಗಾಧರ್ ದಾಖಲಾತಿಗಳನ್ನು ಪರಿಸೀಲಿಸಿದರು. ಸದರಿ ಜಮೀನು ರಾಮಚಂದ್ರಪುರ ಸರ್ವೇ ನಂ.72ರಲ್ಲಿ 5.19 ಗುಂಟೆ ಜಮೀನು ಇದ್ದು, ಈ ಜಮೀನು ಒಂದು ವರ್ಷದ ಹಿಂದೆ ಭಾಗ್ಯ ಕೊಂ ರಾಜೇಶ್ ಎಂಬುವರಿಗೆ ಪುಟ್ಟಯ್ಯ, ಸಿದ್ದಯ್ಯ, ದ್ಯಾವಯ್ಯ, ಲಕ್ಷ್ಮಮ್ಮ ಜಂಟಿ ಖಾತೆಯಿಂದ ಕ್ರಯವಾಗಿದೆ. ಆದರೆ ಸಾಗುವಳಿಪತ್ರವನ್ನು ಅವರು ಪಡೆದಿರಲಿಲ್ಲ.

ಮೃತಪಟ್ಟಿರುವ ಕೃಷ್ಣಮೂರ್ತಿ ಈ ಜಾಗವನ್ನು ಸಾಗುವಳಿ ಮಾಡುತ್ತಿದ್ದು ಇದು ನಮ್ಮ ಕುಟುಂಬದ ಆಸ್ತಿ ಎಂದು ಮೃತನ ಕುಟುಂಬದ ಸದಸ್ಯರು ಪಟ್ಟು ಹಿಡಿದು ಕುಳಿತರು. ಎಲ್ಲವನ್ನು ಆಲಿಸಿದ ಉಪತಹಸೀಲ್ದಾರ್ ಎರಡು ಕುಟುಂಬದವರ ಮನವೊಲಿಸಿ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು. ಮುಂದಿನ ದಿನಗಳಲ್ಲಿ ಇಬ್ಬರ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳೋಣ ಎಂದು ಭರವಸೆ ನೀಡಿದರು.

ಚಿತ್ರ:-01. ಮಾದೀಹಳ್ಳಿ ಹೋಬಳಿ ರಂಗನ ಕೊಪ್ಪಲು ಗ್ರಾಮದ ಮೃತ ಕೃಷ್ಣಮೂರ್ತಿ ಕುಟುಂಬದವರು ಹಾಗೂ ಜಮೀನಿನ ಖಾತೆದಾರ ಭಾಗ್ಯ ರಾಜೇಶ್ ಎಂಬುವರ ನಡುವೆ ವಾಗ್ವಾದ ನಡೆದಿದ್ದು ಉಪತಹಸೀಲ್ದಾರ್ ಗಂಗಾದರ್ ಮನವೊಲಿಸಿದರು.