ಹೊನ್ನಾವರ: ಇಲ್ಲಿಯ ಶರಾವತಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ರಾಜೇಶ ಸಾಳೆಹಿತ್ತಲ, ಉಪಾಧ್ಯಕ್ಷರಾಗಿ ಉಲ್ಲಾಸ ನಾಯ್ಕ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜೇಶ ಸಾಳೆಹಿತ್ತಲ್ 5ನೇ ಸಲ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಈ ಹಿಂದೆ ಉಪಾಧ್ಯಕ್ಷರೂ ಆಗಿದ್ದರು. ಉಲ್ಲಾಸ ನಾಯ್ಕ ಎರಡನೇ ಸಲ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸಂಘದ ನಿಕಟಪೂರ್ವ ಅಧ್ಯಕ್ಷ ರಾಜು ನಾಯ್ಕ, ಉದಯ ಶಿವಾ ನಾಯ್ಕ, ಜನಾರ್ದನ ನಾಯ್ಕ, ಮೋಹನ ನಾಯ್ಕ, ಮಂಜುನಾಥ ನಾಯ್ಕ, ರವೀಂದ್ರ ನಾಯ್ಕ, ಲಕ್ಷ್ಮೀನಾರಾಯಣ ಸಾಳೆಹಿತ್ತಲ, ಸುಧಾಕರ ನಾಯ್ಕ, ಓಲ್ವಿನ್ ಲೂಯಿಸ್ ಡಿಸಿಲ್ವಾ, ಗೀತಾ ವಂದೂರಕರ, ಮುಕ್ತಾ ನಾಯ್ಕ, ರಾಘವೇಂದ್ರ ಹೊನ್ನಾವರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.