ಜಿಲ್ಲೆ

ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣದಲ್ಲಿ ಸುವ್ಯವಸ್ಥಿತ ಯುಜಿಡಿನಿರ್ಮಿಸಲು 100 ಕೋಟಿ ರೂ. ಅಗತ್ಯ!.

reportermys

ಚನ್ನರಾಯಪಟ್ಟಣ: ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣದಲ್ಲಿ ಸುವ್ಯವಸ್ಥಿತ ಯುಜಿಡಿ(ಒಳಚರಂಡಿ) ನಿರ್ಮಿಸಲು 100 ಕೋಟಿ ರೂ. ಅಗತ್ಯವಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ಪಟ್ಟಣದ ವಾರ್ಡ್ ನಂ.10 ರ ಹೆಚ್.ಡಿ.ದೇವೆಗೌಡ ನಗರದಲ್ಲಿ ಗುರುವಾರ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸದ್ಯವಿರುವ ಯುಜಿಡಿ ವ್ಯವಸ್ಥೆಗೆ ಒತ್ತಡ ಹೆಚ್ಚಿತ್ತಿದೆ ಎಂದರು.


ವರ್ಷದಲ್ಲಿ ಹಲವು ಬಾರಿ ದುರಸ್ತಿಯೊಂದಿಗೆ ಕಾರ್ಯನಿರ್ವಹಿಸುವ ಸ್ಥಿತಿ ಇದೆ. ಇದನ್ನು ಮನಗಂಡು ಕೊಳಚೆ ನಿಮೂರ್ಲನಾ ಮಂಡಳಿಗೆ ವಿಸ್ತ್ರುತ ವರದಿ ಸಲ್ಲಿಕೆಗಾಗಿ 10 ಲಕ್ಷ ರೂ. ಹಣ ಕಟ್ಟಲಾಗಿದೆ. ಆದರನ್ವಯ ಸರ್ಕಾರದಿಂದ ಶೀಘ್ರ ಅನುದಾನ ತಂದು ಹೊಸ ಯುಜಿಡಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.


ಟಿಎಪಿಸಿಎಂಎಸ್ ನಿರ್ದೇಶಕ ಅನಿಲ್‌ಕುಮಾರ್ ಮಾತನಾಡಿ, ಹೆಚ್.ಡಿ.ದೇವೆಗೌಡ ನಗರಕ್ಕೆ ಹಿಂದೆ ಟ್ಯಾಂಕರ್‌ನಿಂದ ನೀರು ಪೂರೈಸುವ ಸ್ಥಿತಿ ಇತ್ತು. ಬಾಲಕೃಷ್ಣ ಅವರು ಶಾಸಕರಾದ ಮೇಲೆ ಕೊಳವೆ ಬಾವಿಗಳ ನಿರ್ಮಾಣದಿಂದ ಕುಡಿಯುವ ನೀರಿನ ಬವಣೆ ನೀಗಿಸಿದ್ದಾರೆ ಎಂದರು.
4.5 ಕೋಟಿ ರೂ. ಯುಜಿಡಿ ವ್ಯವಸ್ಥೆಯನ್ನು ಉದಯಗಿರಿ ಬಡಾವಣೆಗಷ್ಟೆ ಸೀಮಿತವಾಗಿತ್ತು. ನಮ್ಮಗಳ ಮನವಿ ಮೇರೆಗೆ ಇಲ್ಲಿಗೆ ವಿಸ್ತರಿಸುವ ಮೂಲಕ 200 ಮನೆಗಳಿಗೆ ಅನುಕೂಲವಾಗಿದೆ. ಶೀಘ್ರದಲ್ಲೆ ಸಂಪರ್ಕಗೊಳ್ಳಲಿದೆ. ಇನ್ನೆರೆಡು ದಿನಗಳಲ್ಲಿ ಬೀದಿ ದೀಪ ಅಳವಡಿಸಲಾಗುವುದು ಎಂದು ತಿಳಿಸಿದರು.


ಬಡಾವಣೆಯನ್ನು ಸ್ಲಂಬೋರ್ಡ್‌ಗೆ ಸೇರಿಸುವ ಬಗ್ಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಇದರಿಂದ ಹೆಚ್ಚಿನ ಅನುದಾನ ಹರಿದುಬರಲಿದೆ. ಈ ಮೂಲಕ ವಾರ್ಡ್‌ನ ಸಮಗ್ರ ಅಭಿವೃದ್ಧಿಯೊಂದಿಗೆ ತಮ್ಮ ಅವಧಿಯಲ್ಲಿ ಮಾದರಿ ವಾರ್ಡ್ ಆಗಿ ರೂಪಿಸುವ ಪಣತೊಟ್ಟಿರುವುದಾಗಿ ಹೇಳಿದರು.


ಪುರಸಭಾ ಅಧ್ಯಕ್ಷೆ ರೇಖಾಅನಿಲ್, ಉಪಾಧ್ಯಕ್ಷೆ ಲಕ್ಷ್ಮಿ, ಪುರಸಭಾ ಮುಖ್ಯಾಧಿಕಾರಿ ಹೇಮಂತ್‌ಕುಮಾರ್ ಹಾಗೂ ಇತರರು ಇದ್ದರು.