ಜಿಲ್ಲೆ

ಶರವೇಗದಲ್ಲಿ ಬೆಳೆಯುತ್ತಿದೆ ಆಧುನಿಕ ತಂತ್ರಜ್ಞಾನ: ಪ್ರೊ.ಎಸ್.ಆರ್. ಮಹದೇವಪ್ರಸನ್ನ

ಮೈಸೂರು: ನಗರದ ಮೈಸೂರು-ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವೀಧರರ ದಿನಾಚರಣೆ-2025 ಕಾರ್ಯಕ್ರಮವನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು.

ಧಾರವಾಡದ ಐಐಐಟಿ ಸಂಸ್ಥೆಯ ಡೆಟಾಸೈನ್ಸ್ ಮತ್ತು ಇಂಟಲಿಜೆನ್ಸ್ ಸಿಸ್ಟಮ್ಸ್ ವಿಭಾಗದ ನಿರ್ದೇಶಕ, ಪ್ರೊ.ಎಸ್.ಆರ್.ಮಹದೇವಪ್ರಸನ್ನ ಮಾತನಾಡಿ, ಇದು ಭಾರತೀಯರ ಶತಮಾನವಾಗಿದೆ. ಆಧುನಿಕ ತಂತ್ರಜ್ಞಾನವು ಶರವೇಗದಲ್ಲಿ ಬೆಳೆಯುತ್ತಿದ್ದು, ಎಐ ತಂತ್ರಜ್ಞಾನವು ಎಲ್ಲ ಕ್ಷೇತ್ರಗಳಲ್ಲೂ ಕ್ಷಿಪ್ರಗತಿಯಲ್ಲಿ ಬಳಕೆಯಾಗುತ್ತಿದೆ.

ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಯುವ ಇಂಜಿನಿಯರ್‌ಗಳು ಹೊಸ ತಾಂತ್ರಿಕ ಬದಲಾವಣೆಗಳಿಗೆ ಪೂರಕವಾಗಿ ತಮ್ಮ ವೃತ್ತಿ ಕೌಶಲ ವೃದ್ಧಿಸಿಕೊಂಡು ಹೊಸ ವಿಚಾರಗಳಿಗೆ ತಮ್ಮನ್ನು ತೆರೆದುಕೊಂಡು ಮುನ್ನಡೆಯಬೇಕಿದೆ ಎಂದು ಹೇಳಿದರು.

ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಏರೋಸ್ಪೇಸ್ ವಿಭಾಗದ ಪ್ರಾಧ್ಯಾಪಕ ಪ್ರೊ. ಗೋಪಾಲನ್ ಜಗದೀಶ್ ಮಾತನಾಡಿ, ಉತ್ತಮ ಜೀವನಶೈಲಿ, ಉತ್ತಮ ಚಿಂತನೆ ನಮ್ಮನ್ನು ಸರಿದಾರಿಯಲ್ಲಿ ಕೊಂಡೊಯ್ಯುತ್ತವೆ.

ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿ, ಗುರುಗಳು, ಸ್ನೇಹಿತರು ಮತ್ತು ತಾವು ಬೆಳೆದು ಬಂದ ದಾರಿ ಹಾಗೂ ನಮ್ಮ ಬದುಕಿನ ಯಶಸ್ಸಿನ ಪಯಣದಲ್ಲಿ ಹೆಗಲುಕೊಟ್ಟ ಪ್ರತಿ ವ್ಯಕ್ತಿ ಮತ್ತು ಸಂಸ್ಥೆಗೆ ಕೃತಜ್ಞರಾಗಿ ಮೌಲ್ಯಯುತ ಬದುಕನ್ನು ಸಾಗಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ನಾಲ್ಕು ವರ್ಷಗಳ ಇಂಜಿನಿಯರಿಂಗ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಇಂಜಿನಿಯರಿಂಗ್‌ನ ವಿವಿಧ ವಿಭಾಗಗಳಲ್ಲಿ ವಿಷಯವಾರು ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳಿಗೆ ಸ್ಕಿಲ್‌ಟೆಕ್ ಮೆಮೊರಿಯಲ್ ಅವಾರ್ಡ್, ಕರೀಗೌಡ. ಆರ್.ಎಸ್. ರಾಜಶೇಖರ್ ದತ್ತಿ, ಸ್ಮಾರಕ ಟ್ರಸ್ಟ್‌ಗಳ ಸ್ಮರಣಾರ್ಥ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಲ್.ಅರುಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಪ್ರಾಂಶುಪಾಲ ಡಾ.ಎಲ್.ಬಸವರಾಜ್, ಕಾರ್ಯಕ್ರಮದ ಪ್ರಧಾನ ಸಂಯೋಜಕರಾದ ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಪಾರ್ಥಸಾರಥಿ, ಎಟಿಎಂಇ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಶಿವಶಂಕರ್, ಖಜಾಂಚಿ ಆರ್. ವೀರೇಶ್, ಆಡಳಿತ ಮಂಡಳಿ ಸದ್ಯರಾದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ, ಎಚ್.ವೆಂಕಟೇಶ್,ವಿವಿಧ ವಿಭಾಗಗಳ ಡೀನ್‌ಗಳಾದ ಡಾ.ಭಾಗ್ಯಶ್ರೀ, ಕಾರ್ಯಕ್ರಮದ ಸಹ ಆಯೋಜಕರಾದ ಡಾ.ಶಕುಂತಲಾ, ಪ್ರೊ.ರಾಘವೇಂದ್ರ, ಪ್ರೊ.ಶ್ರೀಶಯನ, ಡಾ.ಕೆ.ಸತೀಶ್, ಪ್ರೊ.ಎಚ್.ಸ್ವಪ್ನ, ಪ್ರೊ.ಸ್ವಾತಿ, ಪ್ರೊ.ಕಾವ್ಯಶ್ರೀ, ಪ್ರೊ.ಮರೀಯಾಸುಷ್ಮಾ ಭಾಗವಹಿಸಿದ್ದರು.