filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40; 
ಜಿಲ್ಲೆ

ಶರಣ್ ಪಂಪವೆಲ್‌ಗೆ ಅನುಮತಿ ನೀಡಿ

ಚಿತ್ರದುರ್ಗ: ವಿಶ್ವ ಹಿಂದು ಪರಿಷದ್‌ನ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರು ಚಿತ್ರದುರ್ಗದ ಹಿಂದು ಮಹಾಗಣಪತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸಿರುವುದು ಸರಿಯಲ್ಲ ಎಂದು ಉತ್ಸವ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಎಂಎಲ್ಸಿ ಕೆ.ಎಸ್.ನವೀನ್ ಜಿಲ್ಲಾಡಳಿತಕ್ಕೆ ಭಾನುವಾರ ಮನವಿ ಸಲ್ಲಿಸಿದರು.

ಗಣಪತಿ ಮೂರ್ತಿ ವಿಸರ್ಜನೆ ವೇಳೆ ರಾಜ್ಯದ ಕೆಲವೆಡೆ ಗಲಾಟೆ ನಡೆದಿರಬಹುದು. ಈ ಕಾರಣ ಮುಂದಿಟ್ಟುಕೊಂಡು ಜಿಲ್ಲಾ ಪ್ರವೇಶ ನಿರ್ಬಂಧಿಸಿರುವುದು ಸೂಕ್ತವಲ್ಲ. ಅವರು ಪ್ರಚೋದನಕಾರಿ ಭಾಷಣ ಮಾಡಲು ಬರುತ್ತಿಲ್ಲ. ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಚಿತ್ರದುರ್ಗದ ಗಣೇಶೋತ್ಸವ ಶಾಂತಿಯುತ, ವಿಶೇಷ ಮಹತ್ವ ಪಡೆದಿದೆ. ಹೀಗಾಗಿ ಪಂಪವೆಲ್ ಪಾಲ್ಗೊಳ್ಳಲು ಅವಕಾಶ ನೀಡಿ ಎಂದು ಮನವರಿಕೆ ಮಾಡಿದರು.

ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ವೆಂಕಟೇಶ್, ಎಡಿಜಿಪಿ ಹಾಗೂ ಎಸ್ಪಿ ಅವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ.

ಹಿಂದು ಮಹಾಗಣಪತಿ ಉತ್ಸವ ಸಮಿತಿ ಮಾರ್ಗದರ್ಶಕ ಬದರಿನಾಥ್, ವಕೀಲ ಉಮೇಶ್ ಇತರರಿದ್ದರು.