ಜಿಲ್ಲೆ

ಶರಣೆ ಅಕ್ಕಮಹಾದೇವಿ ಬದುಕು ಮಾದರಿ

ಬೀದರ್: ಶರಣೆ ಅಕ್ಕಮಹಾದೇವಿ ಸೇರಿ 12ನೇ ಶತಮಾನದ ಎಲ್ಲ ಶರಣೆಯರ ಬದುಕು ಮತ್ತು ಅವರು ತೋರಿದ ತ್ಯಾಗಮಯ ಜೀವನ ಸರ್ವಕಾಲಕ್ಕೂ ಮಾದರಿಯಾಗಿದೆ ಎಂದು ಭಾರತೀಯ ಬಸವ ಬಳಗದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಕುಂತಲಾ ಬೆಲ್ದಾಳೆ ಹೇಳಿದರು.
ನಗರದ ಗುಮ್ಮೆ ಕಾಲನಿಯ ಜೈ ಹನುಮಾನ ಮಂದಿರದಲ್ಲಿ ಅಕ್ಕಮಹಾದೇವಿ ಮಹಿಳಾ ಭಜನೆ ಮತ್ತು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಏಳಿಗೆಗಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಮುಕ್ತ ಅವಕಾಶ ನೀಡಿದವರು ಬಸವಾದಿ ಶರಣರು. ಅನುಭವ ಮಂಟಪದ ಮೂಲಕ ಸ್ತ್ರೀ ಸಮುದಾಯಕ್ಕೆ ಸಮಾನತೆಯ ಪರಿಕಲ್ಪನೆ ನೀಡಿದರು ಎಂದರು.
ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಮಾತನಾಡಿ, ಜಗತ್ತಿನಲ್ಲಿ ಭಾರತ ಶ್ರೀಮಂತಿಕೆ ಸಂಸ್ಕೃತಿ ಹೊಂದಿರುವ ಏಕೈಕ ದೇಶ ಎಂದು ಹೇಳಿದರು.
ಹಿರಿಯ ಸಾಹಿತಿ ಡಾ.ಎಂ.ಜಿ. ದೇಶಪಾಂಡೆ ಮಾತನಾಡಿದರು. ಸಂಘದ ಅಧ್ಯಕ್ಷೆ ಸರೋಜನಿ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶಿವಶರಣಪ್ಪ ಗಣೇಶಪುರ, ಸುಭಾಷ ಬಿರಾದಾರ್, ಸಂಗಮೇಶ ಬಿರಾದಾರ್, ರಾಜಕುಮಾರ ಕಾಡವಾದ, ಲಿಂಗಶೆಟ್ಟಿ ಬಿರಾದಾರ್, ಮೋಹನ ಪಾಟೀಲ್, ಸಂಘದ ಪದಾಕಾರಿಗಳಾದ ಸಂಗೀತಾ ಪಾಟೀಲ್, ಈರಮ್ಮ, ಪದ್ಮಾವತಿ, ನಿರ್ಮಲಾ, ಪ್ರೇಮಲಾ, ಮಹಾದೇವಿ, ವಿದ್ಯಾವತಿ, ಉಮಾದೇವಿ, ಕಲಾವತಿ, ರೇಣುಕಾ ಇತರರಿದ್ದರು.
ಗೀತಾ ಪಾಟೀಲ್ ಸ್ವಾಗತಿಸಿದರು. ಉಮಾಕಾಂತ ಮೀಸೆ ನಿರೂಪಣೆ ಮಾಡಿದರು. ಭಾರತಿ ಬಿರಾದಾರ್ ವಂದಿಸಿದರು. ಅಶ್ವಿನಿ ಬಂಪಳ್ಳಿ ಶಾಸ್ತ್ರೀಯ ಸಂಗೀತ, ಕವಿತಾ ಸ್ವಾಮಿ ವಚನ ಗಾಯನ ನಡೆಸಿಕೊಟ್ಟರು. ಜಗದೇವಿ ಪಾಟೀಲ್ ಹಾಗೂ ರೂಪಾ ಪಾಟೀಲ್ ಜಾನಪದ ಗೀತೆ ಪ್ರಸ್ತುತಪಡಿಸಿದರು.