ಜಿಲ್ಲೆ

ಶರಣರ ಸಾಮಾಜಿಕ,ಚಳವಳಿಯಡೆ ಎಲ್ಲರೂ ಆಕರ್ಷಿರಾಗಿದ್ದರೂ

ಚಿತ್ರದುರ್ಗ: ಬಸವಾದಿ ಶರಣರು 12ನೇ ಶತಮಾನದಲ್ಲಿ ನಡೆಸಿದ ಸಾಮಾಜಿಕ,ಧಾರ್ಮಿಕ ಚಳವಳಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ,ಅಪಘಾ ನಿಸ್ತಾನದಿಂದ ಬಂಗಾಳದವರೆಗೆ ಜನಾಕರ್ಷಣೆಗೆ ಒಳಗಾಗಿತ್ತು ಎಂದು ಶ್ರೀ ತಿಪ್ಪೇರುದ್ರ ಸ್ವಾಮೀಜಿ ಹೇಳಿದರು. ಮುರುಘಾಮಠದ ಶ್ರೀ ಮುರುಗಿ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಲೀಲಾವಿಶ್ರಾಂತಿ ತಾಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿವಶರಣ ಕುರುಬ ಗೊ ಲ್ಲಾಳೇಶ್ವರ ಜಯಂತಿಯಲ್ಲಿ ಮಾತನಾಡಿ,ವರ್ಣ, ವರ್ಗ, ಜಾತಿ,ಲಿಂಗಗಳ ವ್ಯವಸ್ಥೆಯ ಮಿತಿಯನ್ನು ಮೀರಿ ರಾಜ-ಮಹಾರಾಜರು,ಕವಿ , ಕಲಾವಿದರು,ಸಾಧಕರು, ಸಂತರು ಶರಣರ ಕಲ್ಯಾಣದ ಕಡೆಗೆ ಆಕರ್ಷಿತರಾಗಿದ್ದರು,ಅಲಕ್ಷಿತರು,ಅನಕ್ಷರಸ್ಥರು ವಿಚಾರ ಕ್ರಾಂತಿಯ ಪ್ರಭಾವ ಕ್ಕೊಳಗಾದರು. ಅಂಥವರಲ್ಲಿ ಗೊಲ್ಲಾಳೇಶ್ವರರು ಒಬ್ಬರಾಗಿದ್ದಾರೆ ಎಂದರು.

ಶ್ರೀ ಪೂರ್ಣಾನಂದ ಸ್ವಾಮೀಜಿ, ಶ್ರೀ ಬೃಹನ್ಮಠದ ಸಂಯುಕ್ತ ಪ.ಪೂ.ಕಾಲೇಜು ಪ್ರಾಂಶುಪಾಲ ಪಿಎಂಜಿ ರಾಜೇಶ್,ನವೀನ್‌ಮಸ್ಕಲ್ ಇ ತರರು ಇದ್ದರು. ಜಮುರಾ ಕಲಾವಿದ ಉಮೇಶ್‌ಪತ್ತಾರ್ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಪಿ.ಉಮಾಶಂಕರ್ ನಿರೂಪಿಸಿದರು.