???????????????????????????????????? 
ಜಿಲ್ಲೆ

ಶರಣರ ಸಂದೇಶಗಳನ್ನು ನೆನಪಿಸಿಕೊಳ್ಳ ಬೇಕಿದೆ

ಚಿತ್ರದುರ್ಗ: ಬಸವ ಜಯಂತಿ ಈ ಸಂದರ್ಭದಲ್ಲಿ ಬಸವಾದಿ ಶರಣರ ಸಂದೇಶಗಳನ್ನು ವಿಶೇಷವಾಗಿ ನೆನಪಿಸಿಕೊಳ್ಳ ಬೇಕಿದೆ ಎಂದು ಮುರುಘಾಮಠದ ಆ ಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು. ಶ್ರೀಮಠದಿಂದ ಶ್ರೀಬಸವೇಶ್ವರ ಜಯಂತಿ ಅಂಗವಾಗಿ ಮಂಗಳವಾರ ಸಂಜೆ ಅನು ಭವ ಮಂಟಪದಲ್ಲಿ ಆಯೋಜಿಸಿದ್ದ‘ಬಸವಣ್ಣನವರ ಆರ್ಥಿಕ ಚಿಂತನೆಗಳು’ಚಿಂತನ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಬಸವಣ್ಣನವರು ಯಾಕೆ ಇನ್ನೂ ಪ್ರಸ್ತುತ?ಅವರ ಆರ್ಥಿಕ ಚಿಂತನೆಗಳು ಹೇಗೆ ಪ್ರಾಮುಖ್ಯ ಎಂಬುದನ್ನು ಮನಗಾಣಬೇಕಿದೆ. ಶ್ರೀಮಠದ ಸತ್ಯಶುದ್ಧ ಕಾಯಕ ತ್ರೈಮಾಸಿಕ ಪತ್ರಿಕೆ,ಅಪರೂಪದ ವಿದ್ವಾನ್ ಪತ್ರಿಕೆಯಾಗಿದೆ ಎಂದರು.

ಹೊಸಪೇಟೆಯ ಆರ್ಥಿಕ ಚಿಂತಕ ಪ್ರೊ.ಟಿ.ಆರ್.ಚಂದ್ರಶೇಖರ್ ಮಾತನಾಡಿ,12ನೇ ಶತಮಾನದ ಶಿವ ಶರಣರ ಜೀವನ ವಿಧಾನಗಳನ್ನು ನೋ ಡಿದಾಗ,ಅವರ ಜೀವನ ವಿಧಾನಗಳನ್ನು ಸಾಮಾಜಿಕ ಧಾರ್ಮಿಕ,ಆರ್ಥಿಕವೆಂದು ವಿಂಗಡಿಸಲಾಗದು. ತಮ್ಮ ವಚನಗಳಲ್ಲಿ ನಿತ್ಯದ ಬದುಕಿನ ಬಗ್ಗೆ ಅವರು ಮಾತನಾಡಿದ್ದಾರೆ. ಕಾಯಕದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ವರ್ಣಕ್ರಮಗಳ ಸಿದ್ಧಾಂತದಲ್ಲಿ ಕಾಯಕಕ್ಕೆ ಬೆಲೆಯಿಲ್ಲ,ಅದರೆ ಶರಣರು ಕಾಯಕವೇ ಕೈಲಾಸ, ದುಡಿಮೆಯೆ ದೇವರು ಎಂಬ ಮೌಲ್ಯದೊಂದಿಗೆ ಬದುಕಿದವರು. ವಚನಕಾರರ ಚಿಂತನೆ ನಿರ್ಲಕ್ಷಕ್ಕೆ ಒಳಗಾಗಿದ್ದ ಸಮಾಜವನ್ನು ಅಪ್ಪಿಕೊಳ್ಳುವಂಥ ಸಂಸ್ಕೃತಿಯನ್ನು ಕಲಿಸಿದೆ. ಮೌಢ್ಯ ತೊರೆದು ಕಾ ಯಕದ ಮೂಲಕ ಬದುಕನ್ನು ಕಟ್ಟಿಕೊಳ್ಳೋಣವೆಂದರು.

ಸತ್ಯ ಶುದ್ಧ ಕಾಯಕ ತ್ರೈಮಾಸಿಕ ಪತ್ರಿಕೆ ಸಂಪಾದಕ ಬಿ.ರಾಜಶೇಖರಪ್ಪ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ,ಈ ಪತ್ರಿಕೆ ಶ್ರೀಮಠದ ಪೀಠಾಧ್ಯಕ್ಷ ರಾಗಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಕಾಲದಲ್ಲಿ ಪ್ರಾರಂಭವಾಗಿದ್ದ ವಿದ್ವತ್‌ಪೂರ್ಣ ಪತ್ರಿಕೆಯಾಗಿತ್ತು. ಈಗ ಈ ಪತ್ರಿಕೆ, ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಅವರಿಂದಾಗಿ ಮರು ಜೀವ ಪಡೆದುಕೊಂಡಿದೆ ಎಂದರು.

ಡಾ.ಶ್ರೀಬಸವಕುಮಾರ ಸ್ವಾಮೀಜಿ,ಚಿತ್ರದುರ್ಗ ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ,ನಿರ್ದೇಶಕ ಸಿದ್ದವ್ವನಹಳ್ಳಿ ಪರಮೇಶ್, ಜಿಲ್ಲಾ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್,ಹರಗುರು ಚರಮೂರ್ತಿಗಳು,ವಿವಿಧ ಸಂಸ್ಥೆಗಳ ಮುಖ್ಯಸ್ಥರು ಇದ್ದರು.

ಸ್ಪರ್ಧಾ ವಿಜೇತರು

ಬಸವ ಜಯಂತಿ ಅಂಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಶಿವಮೊಗ್ಗದ ಎಸ್.ಇ.ಗಾಯತ್ರಿ,ಚಿತ್ರದುರ್ಗದ ವಿ.ವಿಕಾಸ್‌ಕುಮಾರ್ ಹಾಗೂ ಎಸ್.ಸಲ್ಮಾ ಕ್ರಮವಾಗಿ ಪ್ರಥಮ,ದ್ವಿತೀಯ ಹಾಗೂ ತೃತೀಯ,ಭಾಷಣ ಸ್ಪರ್ಧೆಯಲ್ಲಿ ಕಲಾವತಿ,ಸೌಂದರ್ಯ,ಎಸ್.ಪರಮೇಶ್ ಕ್ರಮವಾಗಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದರು.

ಬೆಂಗಳೂರಿನ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದ ಡಾ.ಪಂಡಿತ್ ಮುದ್ದುಮೋಹನ್ ಅವರು ವಚನಗಾಯನ,ಎಸ್‌ಜೆಎಂ ದಂತ ವೈ ದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅನುಭವ ಮಂಟಪ ನೃತ್ಯರೂಪಕ,ಎಸ್‌ಜೆಎಂ ಕಾನೂನು ಮಹಾವಿದ್ಯಾಲಯದ ವಿದ್ಯಾ ರ್ಥಿ ಗಳು ‘ಭಾವಿ ಮತದಾರರಿಗೆ ಅರಿವು’ರೂಪಕ ನಡೆಸಿಕೊಟ್ಟರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಪ್ರೊ.ಜಯಲಕ್ಷ್ಮೀ ಸ್ವಾಗತಿಸಿ,ನೇತ್ರಾವತಿ ವಂದಿಸಿದರು.

---