filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 43; 
ಜಿಲ್ಲೆ

ಶರಣರ ವಚನಗಳು ಎಲ್ಲರಿಗೂ ದಾರಿದೀಪ

ಕೊಳ್ಳೇಗಾಲ: ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಅಕ್ಕನ ಬಳಗ, ವೀರಶೈವ ಮಹಿಳಾ ವೇದಿಕೆಯಿಂದ ಶನಿವಾರ ವಚನ ಸಂಭ್ರಮ ಮಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅಕ್ಕನ ಬಳಗದ ಗೌರವಾಧ್ಯಕ್ಷೆ ಪರಿಮಳಾ ನಾಗಪ್ಪ ಮಾತನಾಡಿ, ಶರಣರ ವಚನಗಳು ಎಲ್ಲರಿಗೂ ದಾರಿ ದೀಪವಾಗಿವೆ. 900 ವರ್ಷಗಳ ಹಿಂದೆಯೇ ಶರಣರು ಅದ್ಭುತವಾದ, ಅರ್ಥಗರ್ಭಿತ ವಚನಗಳನ್ನು ಸಮಾಜಕ್ಕೆ ನೀಡಿದ್ದಾರೆ. ಸಮಾನತೆ ಸೇರಿದಂತೆ ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ನಿಟ್ಟಿನಲ್ಲಿ ಶರಣರು ವಚನಗಳನ್ನು ರಚಿಸಿದ್ದಾರೆ ಎಂದರು.

ನಮ್ಮ ಮನೆಯ ಮಕ್ಕಳಿಗೆ ವಚನಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಡಬೇಕು ಹಾಗೂ ಕಲಿಸಬೇಕು. ಮನೆ ಮನೆಗೂ ವಚನಗಳನ್ನು ತಲುಪಿಸಬೇಕು. 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನತೆ ನೀಡಿದ್ದರು. ಹೆಣ್ಣು ಮಕ್ಕಳು ಪುರುಷರ ಸಮಾನಾಗಿ ಕುಳಿತು ಮಾತನಾಡುವ ಅವ ಕಾಶ ನೀಡಿದ್ದರು ಎಂದು ಹೇಳಿದರು.

ವಚನ ಕುಮಾರಸ್ವಾಮಿ ಮಾತನಾಡಿ, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ವಚನ ಸಂಭ್ರಮ ಕಾರ್ಯಕ್ರಮ ಸಾರ್ಥಕವಾಗುತ್ತದೆ. ಸತ್ಯ ನುಡಿಯುವುದೇ ದೇವಲೋಕ, ಮಿಥ್ಯ ನುಡಿ ಯುವುದೇ ಮರ್ತ್ಯಲೋಕ ಎಂದು ಶರಣರು ಹೇಳಿದ್ದಾರೆ. ಒಳ್ಳೆಯ ವಿಷಯಗಳು, ಒಳ್ಳೆಯ ಕಾರ್ಯಗಳು, ವಚನ ಭಜಿಸುವ ಸ್ಥಳದಲ್ಲಿ ಸ್ವರ್ಗ ನಿರ್ಮಾಣವಾಗುತ್ತದೆ. ವಚನಗಳನ್ನು ನುಡಿಯುವಾಗ ಮನದಲ್ಲಿರುವ ಮಲಿನ ನಾಶವಾಗುತ್ತದೆ ಎಂದು ವಚನಗಳ ಮಹತ್ವ ತಿಳಿಸಿದರು.

ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಹೆಣ್ಣು ಮಕ್ಕಳಿಗೆ ಪರವಾಗಿ ಹೋರಾಟ ಮಾಡಿದ್ದರು. ತಮ್ಮ ಮನೆಯಿಂದಲೇ ಮೊದಲು ಸಮಾನತೆಗಾಗಿ ಹೋರಾಟ ನಡೆಸಿದರು. ಮೊದಲಿಗೆ ಅಕ್ಕ ನಾಗಲಾಂಬಿಕೆ ಅವರಿಗೆ ಲಿಂಗದೀಕ್ಷೆ ನೀಡಿದ್ದರು. ಆ ಲಿಂಗದೀಕ್ಷೆಯೇ ಇಂದು ಎಲ್ಲ ಹೆಣ್ಣು ಮಕ್ಕಳ ಕೈ ತಲುಪಿದೆ ಎಂದರು.

ಬಸವಣ್ಣ, ಅಕ್ಕ ಮಹಾದೇವಿ, ಚೆನ್ನಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ಅಂಬಿಗರ ಚೌಡಯ್ಯ ಇನ್ನಿತರ ಶರಣರ ವೇಷ ಭೂಷಣಗಳನ್ನು ಮಕ್ಕಳು ಧರಿಸಿದ್ದು ಎಲ್ಲರನ್ನು ಆಕರ್ಷಿಸಿತು.

ರೂಪಾ ಕುಮಾರಸ್ವಾಮಿ, ಅಕ್ಕನ ಬಳಗ ಅಧ್ಯಕ್ಷೆ ಅರುಣ ಕಾರ್ತಿಕ್, ಕಾರ್ಯದರ್ಶಿ ಸವಿತಾ ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಬಿ.ತೋಟೇಶ್, ಮೈಸೂರು ವಿಶ್ವ ವಚನ ಫೌಂಡೇಷನ್ ಅನಿಲ್ ಕುಮಾರ್, ವೀರಭದ್ರಸ್ವಾಮಿ ಮತ್ತಿತರರಿದ್ದರು.