ಮುನವಳ್ಳಿ ಪಟ್ಟಣದ ಸೋಮಶೇಖರ ಮಠದಲ್ಲಿ ಶುಕ್ರವಾರ ಬಸವ ಜಯಂತಿ ಆಚರಿಸಲಾಯಿತು. ಮುರುಘೇಂದ್ರ ಸ್ವಾಮೀಜಿ, ವೀರಣ್ಣ ಕೊಳಕಿ, ಕಲ್ಲಪ್ಪ ನಲವಡೆ, ಶ್ರೀಕಾಂತ ಮಲಗೌಡ್ರ, ರುದ್ರಗೌಡ ಕಳಸನಗೌಡ್ರ ಇತರರು ಇದ್ದರು. 
ಜಿಲ್ಲೆ

ಶರಣರ ವಚನಗಳು ಎಂದಿಗೂ ಪ್ರಸ್ತುತ

ಮುನವಳ್ಳಿ: ಪಟ್ಟಣದ ಸೋಮಶೇಖರ ಮಠದಲ್ಲಿ ಶುಕ್ರವಾರ ಬಸವ ಜಯಂತಿ ಆಚರಿಸಲಾಯಿತು. ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ವಚನಗಳು ಸಾರ್ವಕಾಲಿಕ ಮೌಲ್ಯಗಳಾಗಿದ್ದು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರು ಸರಳಗನ್ನಡದಲ್ಲಿ ವೇದಗಳ ಸಾರ ತಿಳಿಸಿ ಜನರಿಗೆ ಅರಿವು ಮೂಡಿಸಿದ್ದಾರೆ ಎಂದರು.

ಶಿಕ್ಷಕ ವೀರಣ್ಣ ಕೊಳಕಿ, ಕಲ್ಲಪ್ಪ ನಲವಡೆ ಮಾತನಾಡಿ, ಬಸವಣ್ಣನವರ ಜೀವನ ಹಾಗೂ ಸಂದೇಶಗಳ ಕುರಿತು ತಿಳಿಸಿದರು. ಶ್ರೀಕಾಂತ ಮಲಗೌಡ್ರ, ರುದ್ರಗೌಡ ಕಳಸನಗೌಡ್ರ, ಶಂಕರ ಗಯ್ಯಳಿ, ಗಂಗಾಧರ ಗೊರಾಬಾಳ, ಬಸವರಾಜ ತುಳಜಣ್ಣವರ, ಮಲ್ಲಿಕಾರ್ಜುನ ಕಮತಗಿ, ವಿರಾಜ ಕೊಳಕಿ, ಪ್ರಶಾಂತ ತುಳಜಣ್ಣವರ, ಐ.ಕೆ.ಮಠಪತಿ, ರುದ್ರಮ್ಮ ಶಿರಸಂಗಿ, ಮಲ್ಲಿಕಾರ್ಜುನ ಶಿಂಥ್ರಿ, ಅನ್ನದಾನೇಶ್ವರ ಮಹಿಳಾ ಮಂಡಳಿ ಸದಸ್ಯರು ಸೇರಿದಂತೆ ಇತರರು ಇದ್ದರು. ಶಿಕ್ಷಕ ಬಿ.ಬಿ.ಹುಲಿಗೊಪ್ಪ ನಿರೂಪಿಸಿದರು.

ಬೈಲಹೊಂಗಲ ವರದಿ: ಮಹಾಮಾನವತಾವಾದಿ ಬಸವಣ್ಣನವರ ಜಯಂತಿಯನ್ನು ಪಟ್ಟಣದ ಮುರಕೀಬಾವಿ ರಸ್ತೆಯ ಉಳವಿ ಚೆನ್ನಬಸವೇಶ್ವರ 1ನೇ ಬಡಾವಣೆಯಲ್ಲಿ ಸ್ಥಳೀಯ ನಾಗರಿಕರು ಸರಳವಾಗಿ ಆಚರಿಸಿದರು. ಬಸವಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ, ಪ್ರಾರ್ಥನೆ, ಸಹಸ್ರ ಮಂತ್ರ ಪಠಣವನ್ನು ಅರ್ಚಕ ಶಿವಲಿಂಗಯ್ಯ ನಂದಿಮಠ ನೆರವೇರಿಸಿದರು. ನೇತೃತ್ವ ವಹಿಸಿದ್ದ ಉಳವಿ ಚೆನ್ನಬಸವೇಶ್ವರ ನಗರದ ಅಭಿವೃದ್ಧಿ ಸಂಘದ ಅಧ್ಯಕ್ಷ, ನಿವೃತ್ತ ಶಿಕ್ಷಕ ಬಿ.ಕೆ.ತಲ್ಲೂರ ಮಾತನಾಡಿ, ಸಮಾಜಕ್ಕೆ ಸಮಾನತೆಯ ಮಂತ್ರ ಸಾರಿದ ಬಸವಣ್ಣನ ತತ್ತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಿ ನಡೆದಾಗ ಬದುಕು ಸಾರ್ಥಕವಾಗುತ್ತದೆ ಎಂದರು. ಗುತ್ತಿಗೆದಾರ ಬಿ.ಎಫ್.ಕೊಳದೂರ, ಹೆಸ್ಕಾಂ ಎಸ್‌ಒ ಶಂಕರ ಬಡಿಗೇರ, ಮೋಹನ ಪಾಟೀಲ, ಬಸವರಾಜ ಗಂಗಣ್ಣನವರ, ತಾಲೂಕು ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಶಿಕ್ಷಕಿ ರಶ್ಮಿ ನಂದಿಮಠ, ಸುರೇಶ ಹಲಕಿ, ಉಮೇಶ ಮೀರಜಕರ್, ಸವಿತಾ ಪಾಟೀಲ, ಸೃಜನ ನಂದಿಮಠ, ಮಂಜುಳಾ ಹಲಕಿ, ಚೆನ್ನಪ್ಪ ಬೇವಿನಕೊಪ್ಪ, ಮಾರುತಿ ಕುಂಬರಿ ಮತ್ತಿತರರು ಉಪಸ್ಥಿತರಿದ್ದರು.