ಜಿಲ್ಲೆ

ಶರಣರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಿ

ಗುಂಡ್ಲುಪೇಟೆ: ಮನೆ ಮನೆಗೆ ಶರಣರ ಸಂದೇಶ ತಲುಪಿಸುವ ಸಲುವಾಗಿ ರಾಜೇಂದ್ರ ಶ್ರೀಗಳು ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು ಎಂದು ಚಿಕ್ಕತುಪ್ಪೂರು ಶಿವಪೂಜಾ ಮಠಾಧ್ಯಕ್ಷ ಶ್ರೀ ಚನ್ನವೀರ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿಕ್ಕ ಎಲಚ್ಚೆಟ್ಟಿ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾ ಬಸವ ಕೇಂದ್ರ ಆಯೋಜಿಸಿದ್ದ ಜಗದ್ಗುರು ಶ್ರೀ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 107ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಸವಾದಿ ಶರಣರ ತತ್ವಾದರ್ಶಗಳನ್ನು ಒಳಗೊಂಡ ಸಾಹಿತ್ಯವೇ ಶರಣರ ಸಂದೇಶವಾಗಿದೆ. ಎಲ್ಲರೂ ಸೇರಿ ಧರ್ಮದ ಆಚಾರ ವಿಚಾರಗಳನ್ನು ಪಾಲಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಕಿವಿಮಾತು ಹೇಳಿದರು.

ಆಯ್ಕೆ: ತಾಲೂಕು ಬಸವ ಕೇಂದ್ರದ ನೂತನ ಅಧ್ಯಕ್ಷರಾಗಿ ಲಕ್ಕೂರು ಚಂದ್ರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಾಚಹಳ್ಳಿ ಜಗದೀಶ್ ಅವರನ್ನು ಆಯ್ಕೆ ಮಾಡಲಾಯಿತು.ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಎಂಸಿಎಸ್ ಪ್ರೌಢಶಾಲೆ ಶಿಕ್ಷಕ ಎಚ್.ಎಂ.ಮಹದೇವಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ದೇಪಾಪುರ ಶಿವಸ್ವಾಮಿ, ಶೋಭಾ ಸಿದ್ದರಾಜು, ಹೊನ್ನೂರು ಪರಮೇಶ್, ಬಾಚಹಳ್ಳಿ ಪಟೇಲ್ ಮಲ್ಲಪ್ಪ, ಮಂಜು ಹೊನ್ನೂರು, ಗುರುಸ್ವಾಮಿ ಧನಗೆರೆ, ವೃಷಭೇಂದ್ರ ಕಣ್ಣೂರು, ದುಗ್ಗಟ್ಟಿ ರಾಜೇಶ್, ಕೊಡಸೋಗೆ ರಮೇಶ್ ಇದ್ದರು.