ಜಿಲ್ಲೆ

ಶರಣಬಸವ ವಿಶ್ವವಿದ್ಯಾಲಯದಲ್ಲಿ ಗ್ಲೋಬಲ್ ಕ್ಯಾಂಪಸ್ ಸ್ಥಾಪನೆಗೆ ಎಜುವೆಂಚರ್ಸ್ ಜತೆ ಮಹತ್ವದ ಒಡಂಬಂಡಿಕೆ

ಉನ್ನತ ಶಿಕ್ಷಣದಲ್ಲಿ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯ ಮತ್ತೊಂದು ಮಹತ್ವದ ಹೆಜ್ಜೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಶರಣಬಸವ ವಿಶ್ವವಿದ್ಯಾಲಯ ಉನ್ನತ ಶಿಕ್ಷಣದ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ತನ್ನ ವಿದ್ಯಾರ್ಥಿಗಳಲ್ಲಿ ಕೌಶಲ ಹೆಚ್ಚಿಸಲು ಎಸ್‌ಬಿಯು ಮುಖ್ಯ ಕ್ಯಾಂಪಸ್‌ನಲ್ಲಿ ಗ್ಲೋಬಲ್ ಕ್ಯಾಂಪಸ್ ಸ್ಥಾಪಿಸಲು ಬೆಂಗಳೂರಿನ ಎಜುವೆಂಚರ್ಸ್ ಜತೆ ಒಡಂಬಡಿಕೆ (ಎಂಒಯು) ಮಾಡಿಕೊಂಡಿದೆ.
ಗ್ಲೋಬಲ್ ಕ್ಯಾಂಪಸ್ ಮೂಲಕ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ, ಅತ್ಯುತ್ತಮ ವಿದೇಶಿ ವಿವಿಗಳ ಜತೆ ಭಾರತೀಯ ವಿವಿಗಳನ್ನು ಜತೆಗೂಡಿಸಿ ಶೈಕ್ಷಣಿಕ ಕಾರ್ಯಚಟುವಟಿಕೆ ನಡೆಸುವಲ್ಲಿ ಎಜುವೆಂರ‍್ಸ್ ಸಂಸ್ಥೆ ಶ್ರೇಷ್ಠತೆ ಹೊಂದಿದೆ. ಅಂತಹ ಸಂಸ್ಥೆಯೊAದಿಗೆ ಒಪ್ಪಂದ ಮಾಡಿಕೊಂಡು ಕಲಬುರಗಿ ಭಾಗದ ವಿದ್ಯಾರ್ಥಿಗಳು ವಿದೇಶಿ ಮಟ್ಟದ ಕಲಿಕೆಗೆ ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ.
ಕುಲಸಚಿವ ಡಾ.ಅನಿಲಕುಮಾರ ಬಿಡವೆ ಮತ್ತು ಎಜುವೆಂಚರ್ಸ್ ನಿರ್ದೇಶಕ ಡಾ.ಅರುಣ ಮುಧೋಳ ವಿವಿ ಅತ್ಯುತ್ತಮ ಹೊಸ ಅಧ್ಯಯನ ಕೇಂದ್ರ ತೆರೆಯುವ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಇದರಿಂದ ಉನ್ನತ ಶಿಕ್ಷಣ ಈ ಪ್ರದೇಶದ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಹತ್ತಿರವಾಗಲಿದೆ.
ಒಡಂಬಡಿಕೆಗೂ ಮುನ್ನ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಅಧ್ಯಾಪಕರೊಂದಿಗೆ ಸಂವಾದ ನಡೆಸಿದ ಡಾ.ಮುಧೋಳ, ಭಾರತೀಯ ವಿವಿಗಳನ್ನು ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್ನ ಪ್ರತಿಷ್ಠಿತ ವಿವಿಗಳ ಜತೆ ಸಂಪರ್ಕಿಸುವಲ್ಲಿ ಎಜುವೆಂಚರ್ಸ್ಗೆ ಅಪಾರ ಅನುಭವ ಹೊಂದಿದೆ. ವಿದ್ಯಾರ್ಥಿ ಮತ್ತು ಅಧ್ಯಾಪಕರ ವಿನಿಮಯ, ಜಂಟಿ ಸಂಶೋಧನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಹಯೋಗ ಕಲ್ಪಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕೈಗೆಟುಕುವ ವೆಚ್ಚದಲ್ಲಿ ವಿದೇಶಗಳ ಪ್ರತಿಷ್ಠಿತ ವಿವಿಗಳಲ್ಲಿ ಪ್ರವೇಶ ಪಡೆಯಲು ಎಂಒಯು ಅನುವು ಮಾಡಿಕೊಡುತ್ತದೆ. ವಿದೇಶಿ ವಿವಿಗಳಲ್ಲಿ ಎಸ್‌ಬಿಯು ವಿದ್ಯಾರ್ಥಿಗಳು ಪಾವತಿಸುವ ಶುಲ್ಕ ಗಣನೀಯ ಕಡಿಮೆ ಮಾಡಿಸಲಾಗುವುದು. ಶಿಕ್ಷಣ ಪೂರ್ಣಗೊಳಿಸಲು ವಿದ್ಯಾರ್ಥಿವೇತನ ಮತ್ತು ಇತರ ಹಣಕಾಸಿನ ಸಹಾಯ ಪಡೆಯಲು ಸಹ ಎಜುವೆಂಚರ್ಸ್ ಕೈಜೋಡಿಸಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಜತೆಗೆ ವಿದೇಶಿ ವಿವಿಗಳಲ್ಲಿ ಶಿಕ್ಷಣ ಮುಂದುವರಿಸಲು ಬಯಸುವವರಿಗೆ ಎಜುವೆಂಚರ್ಸ್ ಕೌನ್ಸೆಲಿಂಗ್ ಸೇವೆ ಒದಗಿಸುತ್ತದೆ. ಅವರಿಗೆ ಅರ್ಜಿ ಸಲ್ಲಿಕೆ, ವಿವಿ ಆಯ್ಕೆ, ವೀಸಾ ಕೊಡಿಸುವಂಥ ಅವಶ್ಯಕತೆ ಹಾಗೂ ದಾಖಲಾತಿಗಳಿಗೆ ಸಹಾಯ ಮಾಡುತ್ತದೆ. ವಿದೇಶಗಳಲ್ಲಿರುವ ವಿದ್ಯಾರ್ಥಿಗಳ ಮಾಹಿತಿ ನೀಡಿ ಅನುಭವ ಪಡೆದುಕೊಳ್ಳಲು ಪೂರಕವಾಗಲಿದೆ ಎಂದು ಡಾ.ಮುಧೋಳ ತಿಳಿಸಿದರು.
ಶರಣಬಸವ ವಿವಿ ಸಹಯೋಗಕ್ಕಾಗಿ ಸೂಕ್ತವಾದ ವಿದೇಶಿ ವಿವಿಗಳನ್ನು ಗುರುತಿಸಿ ಜಂಟಿ ಪದವಿ ಕಾರ್ಯಕ್ರಮ, ಇಂಟರ್ನ್ಶಿಪ್ ಮತ್ತು ವಿನಿಮಯ ಅವಕಾಶಗಳನ್ನು ಒಡಂಬಡಿಕೆ ಕಲ್ಪಿಸಲಿದೆ. ಜಂಟಿ ಸೆಮಿನಾರ್, ಕಾರ್ಯಾಗಾರ ಮತ್ತು ಶೈಕ್ಷಣಿಕ ಸಮ್ಮೇಳನ ಆಯೋಜಿಸಲು ಪ್ರೇರೇಪಿಸಲಾಗುವುದು ಎಂದರು.
ನAತರ ಡಾ.ಮುಧೋಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದೇಶದಲ್ಲಿ ವ್ಯಾಸಂಗ ಮಾಡುವುದರಿಂದ ಆಗುವ ಪ್ರಯೋಜನ ಮತ್ತು ವಿದೇಶಿ ವಿವಿ ಪದವಿಯೊಂದಿಗೆ ವೃತ್ತಿಪರ ಭವಿಷ್ಯ ಹೇಗೆ ಉಜ್ವಲಗೊಳಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಮಕುಲಪತಿ ಪ್ರೊ.ವಿ.ಡಿ. ಮೈತ್ರಿ, ಡೀನ್ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ ಇತರರಿದ್ದರು.