ಕಲಬುರಗಿ: ಶ್ರಾವಣ ಮಾಸದ ಕೊನೇ ಸೋಮವಾರ, ಬೆನಕನ ಅಮಾವಾಸ್ಯೆ ಒಂದೇ ದಿನ ಇರುವುದರಿಂದ ನಗರದ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಬೆಳಗ್ಗೆಯಿಂದ ಸಂಜೆವರೆಗೆ ಸಾವಿರಾರು ಭಕ್ತರು ಆಗಮಿಸಿ ನಮನಗಳನ್ನು ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.
ನಾಡಿನ ವಿವಿಧೆಡೆಯಿಂದ ತಂಡೋಪ ತಂಡವಾಗಿ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಕಾಯಿ, ಕರ್ಪೂರ, ಬಿಲ್ವಪತ್ರಿ, ಊದಿನ ಕಡ್ಡಿ, ಹೂವು, ನೈವೇದ್ಯೆಯನ್ನು ಶರಣರಿಗೆ ಅರ್ಪಿಸಿ, ಧನ್ಯರಾದರು.
ಸೋಮವಾರ ನಿಮಿತ್ತ ದೇವಸ್ಥಾನದಲ್ಲಿ ಶ್ರೀಶರಣಬಸವೇಶ್ವರರಿಗೆ ವೈವಿಧ್ಯಮಯ ಪುಷ್ಪ ಮತ್ತು ರುದ್ರಾಕ್ಷಿ ಮಾಲೆಗಳಿಂದ ವಿಶೇಷವಾಗಿ ಅಲಂಕಾರ ನೆರವೇರಿಸಲಾಗಿತ್ತು. ಬೆಳಗ್ಗೆ, ಮಧ್ಯಾಹ್ನ, ಸಂಜೆ ತ್ರಿಕಾಲ ಪೂಜೆಗಳು ನಡೆದವು.
ಭಕ್ತರು ಶರಣಬಸವೇಶ್ವರರ ಗದ್ದುಗೆ, ದೇವಸ್ಥಾನದ ಆವರಣದಲ್ಲಿನ ನಂದಿ ಮೂರ್ತಿಗೆ, ಮಹಾದಾಸೋಹ ಮನೆಯಲ್ಲಿನ ದಾಸೋಹ ಗದ್ದುಗೆ, ನಂದಾದೀಪದ ದರ್ಶನ ಮಾಡಿದರು. ಭಕ್ತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಶರಣ ಸಂಸ್ಥಾನದಿAದ ಸೇವಾಕರ್ತರನ್ನು ನೇಮಿಸಿ, ಸರತಿ, ಪೂಜಾ ಕೈಂಕರ್ಯ ಸೇರಿ ಇತರ ಕಾರ್ಯಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರ ತಂಡಗಳಿAದ ಭಜನೆ ನಡೆಯಿತು. ದೇವಸ್ಥಾನದ ಆವರಣದಲ್ಲಿ ಅಲ್ಲಲ್ಲಿ ತಂಡೋಪತAಡವಾಗಿ ಭಜನೆಗೈದು ಶರಣರಿಗೆ ಭಕ್ತಿ ಸಮರ್ಪಣೆ ಮಾಡಿದರು.