ಜಿಲ್ಲೆ

ಶರಣ ಸಂಸ್ಕೃತಿ ಉತ್ಸವಸರಳ ಆಚರಣೆ

ಚಿತ್ರದುರ್ಗ:ನಗರದ ಮುರುಘರಾಜೇಂದ್ರ ಬೃಹನ್ಮಠದಿಂದ ಈ ಬಾರಿಯ ಶರಣ ಸಂಸ್ಕೃತಿ ಉತ್ಸವವನ್ನು ಅಕ್ಟೋಬರ್ 21ರಿಂದ 25ರವರೆಗೆ ಸರಳವಾಗಿ ಆಚ ರಿಸಲಾಗುವುದು ಎಂದು ಶ್ರೀ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಶ್ರೀ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಉತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಶ್ರೀಗಳು,ಉತ್ಸವದ ಕಾರ್ಯಾಧ್ಯಕ್ಷರನ್ನಾಗಿ ಕೆ.ಸಿ.ನಾಗರಾಜು ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಿಸಿದರು.
ಉತ್ಸವದ ಗೌರವಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ,ಶೃಂಗೇರಿ ಮಠ ಹಾಗೂ ಮುರುಘಾಮಠಕ್ಕೆ ಬ್ರಿಟಿಷ್ ಸರ್ಕಾರ ಜಗದ್ಗುರು ಪದವಿ ನೀಡಿದೆ. ಮುರುಘಾ ಮಠ ಅನೇಕ ಅಂಧ ಸಂಪ್ರದಾಯಗಳನ್ನು ತೊಡೆದು ಹಾಕಲು ಶ್ರಮಿಸುತ್ತಿದೆ. 12ನೇ ಶತಮಾನದ ವೈಚಾರಿಕ ಚಿಂತನೆಗಳನ್ನು ಮುಂದುವರಿಸಿಕೊಂಡು ಬಂದಿದೆ. ಖರ್ಚುವೆಚ್ಚದ ಹೊರೆಯಾಗದಂತೆ ಉತ್ಸವವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದರು.
ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ,ಶರಣಸಂಸ್ಕೃತಿ ಉತ್ಸವದ ವೇದಿಕೆಯಲ್ಲಿ ಅನೇಕ ಸಾಧಕರಿಗೆ ಅವಕಾಶ ದೊರಕಿದೆ. ಮಠದ ಪರಂಪ ರೆಯನ್ನು ಮುಂದುವರಿಸ ಬೇಕಿದೆ ಎಂದರು. ಡಿಸಿಸಿ ಅಧ್ಯಕ್ಷ ಎಂ.ಕೆ. ತಾಜಪೀರ್ ಮಾತನಾಡಿ,ಶ್ರೀ ಮಠಕ್ಕೆ ಎಲ್ಲ ಧರ್ಮೀಯರು ಭಕ್ತಿಯಿಂದ ಭೇಟಿ ನೀಡುತ್ತಾರೆ. ನಾವುಗಳು ಉತ್ಸವದಿಂದ ದೂರ ಉಳಿಯಬಾರದು.
ಯುವಕರು,ರೈತರಿಗೆ ಅನುಕೂಲವಾಗುವಂಥ ಕಾರ‌್ಯಕ್ರಮಗಳನ್ನು ಆಯೋಜಿಸಬೇಕು. ಯಾವುದೇ ಸಮುದಾಯಕ್ಕೆ ಸೀಮಿತವಾಗದ ಶ್ರೀಮಠ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದರು. ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ,ಡಾ.ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ,ಶ್ರೀ ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ.
ಹಾವೇರಿ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ,ಶಿಕಾರಿಪುರದ ಶ್ರೀ ಚೆನ್ನಬಸವ ಸ್ವಾಮೀಜಿ,ನಿಪ್ಪಾಣಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಐಮಂಗಲದ ಶ್ರೀ ಬಸವ ಹರಳಯ್ಯ ಸ್ವಾಮೀಜಿ,ತಂಗಡಗಿಯ ಶ್ರೀ ಅನ್ನದಾನಿಭಾರತಿ ಬಸವಪ್ರಿಯ ಹಪ್ಪಣ್ಣ ಸ್ವಾಮೀಜಿ,ಇರಕಲ್ ಶಕ್ತಿಪೀಠದ ಶ್ರೀ ಬಸವಪ್ರಸಾದ ಸ್ವಾಮೀಜಿ,ಜಗಳೂರು ಶ್ರೀ ಪ್ರಭುಲಿಂಗ ಸ್ವಾಮೀಜಿ,ಹೊಳವನಹಳ್ಳಿ ಶ್ರೀ ತಿಪ್ಪೇರುದ್ರ ಸ್ವಾಮೀಜಿ,ಶ್ರೀ ಮುರುಘೇಂದ್ರ ಸ್ವಾ ಮೀಜಿ,ಎನ್.ಬಿ.ವಿಶ್ವನಾಥಯ್ಯ,ಕೆ.ಎಂ.ವೀರೇಶ್,ನಿರಂಜನಮೂರ್ತಿ,ಎ.ಎನ್.ಮೂರ್ತಿ,ಖಾಸಿಂಅಲಿ,ಫಾತ್ಯರಾಜನ್,ಜಿತೇಂದ್ರಹುಲಿಕುಂಟೆ, ಆನಂದಪ್ಪ,ಫೈಲ್ವಾನ್‌ತಿಪ್ಪೇಸ್ವಾಮಿ ಇದ್ದರು.ಷಡಾಕ್ಷರಯ್ಯ ನಿರೂಪಿಸಿದರು.

(ಸಿಟಿಡಿ 20 ಕೆ.ಸಿ.ನಾಗರಾಜು)