ಚಿತ್ರದುರ್ಗ: ಬಸವತತ್ತ್ವ ಧ್ವಜಾರೋಹಣದೊಂದಿಗೆ ಮುರುಘಾಮಠದ ಈ ಬಾರಿಯ ಶರಣ ಸಂಸ್ಕೃತಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ ಅವರು,ಪ್ರಾಚೀನ ಪರಂಪಂರೆಯನ್ನು ಮು ರುಘಾಮಠಕ್ಕೆ ಶತಮಾನಗಳ ಇತಿಹಾಸವಿದೆ. ಶ್ರೀಮಠದ ಈ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾ ಬ್ದಾರಿಯಾಗಿದೆ ಎಂದರು. ಶರಣ ಸಂಸ್ಕೃತಿ ಉತ್ಸವ-2025ರ ದಾಸೋಹಕ್ಕೆ ವಾಣಿಜ್ಯೋದ್ಯಮಿ ಜೆ.ಎಂ.ಜಯಕುಮಾರ್ 50 ಸಾವಿರ ರೂ. ದೇಣಿಗೆ ನೀಡಿದರು.
ಶ್ರೀಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ,ಹರಗುರು ಚರಮೂರ್ತಿಗಳು,ಚಿತ್ರದುರ್ಗ ವೀರಶೈವ ಅರ್ಬನ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಪಟೇಲ್ ಶಿವಕುಮಾರ್, ವರ್ತಕ ಸಿದ್ದಾಪುರದ ನಾಗಣ್ಣ,ಬಾಪೂಜಿ ವಿದ್ಯಾಸಂಸ್ಥೆ ಕಾ ರ‌್ಯದರ್ಶಿ ಕೆ.ಎಂ.ವೀರೇಶ್,ಪಟೇಲ್‌ಹನುಮಂತಪ್ಪ,ಕೆಇಬಿ ಷಣ್ಮ್ಮುಖಪ್ಪ,ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು ಇದ್ದರು. ತೋಟಪ್ಪ ಉತ್ತಂಗಿ ಧ್ವಜಗೀತೆ ಹಾಡಿದರು. ನವೀನ್ ಮಸ್ಕಲ್ ನಿರೂಪಿಸಿದರು. ಪಿ.ಟಿ.ಜ್ಞಾನಮೂರ್ತಿ ಸ್ವಾಗತಿಸಿದರು.
ಸಹಜ ಶಿವಯೋಗ
ಉತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸಹಜ ಶಿವಯೋಗ ಪಾತ್ಯಕ್ಷೆ ಗುರುವಾರದ ಕಾರ‌್ಯಕ್ರಮದಲ್ಲಿ ಗುರುಮಠಕಲ್ ಖಾಸಾ ಶ್ರೀ ಮುರುಘಾಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ,ಏಕಾಗ್ರತೆಯ ಧ್ಯಾನದಿಂದ ಶಿವಯೋಗ ದೊರೆಯು ತ್ತದೆ.ಯಾರು ಏಕಾಗ್ರತೆ ಸಾಧಿಸುತ್ತಾರೆಯೋ ಅವರು ತನ್ನ ಬದುಕಿನಲ್ಲಿ ಸಾಧನೆ ಮಾಡುತ್ತಾರೆ ಎಂದರು.
ಡಾ.ಬಸವಕುಮಾರ ಸ್ವಾಮೀಜಿ, ಚಿಗರಹಳ್ಳಿ ಶ್ರೀಮರುಳಶಂಕರದೇವ ಗುರುಪೀಠದ ಶ್ರೀ ಸಿದ್ದಬಸವ ಕಬೀರಸ್ವಾಮೀಜಿ,ಶಿರಗುಪ್ಪ ಬ ಸವ ಕೇಂದ್ರದ ಶ್ರೀ ಬಸವಭೂಷಣ ಸ್ವಾಮೀಜಿ,ಗೋರಚಿಂಚೋಳಿ ಶ್ರೀ ಸಿದ್ದರಾಮೇಶ್ವರಮಠದ ಶ್ರೀಸಿದ್ದರಾಮ ಪಟ್ಟದೇವರು,ಚಿತ್ರದು ರ್ಗದ ಡಾ.ಬಸವ ಚೇತನ ಸ್ವಾಮೀಜಿ,ಐಮಂಗಲ ಶ್ರೀ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ,ಶರಣೆ ಮುಕ್ತಾಯ ಕ್ಕ,ಬೀದರ್‌ನ ವಚನ ಸಂಸ್ಕೃತಿ ತಾಯಿ,ಲಲಿತಾ ತಾಯಿ,ಕೆಇಬಿ ಷಣ್ಮುಖಪ್ಪ,ಕೆ.ಎಂ.ವೀರೇಶ್,ನಿವೃತ್ತ ಪ್ರಾಚಾರ‌್ಯ ರುದ್ರಪ್ಪ ಹರಗುರು ಚರ ಮೂರ್ತಿಗಳು ಇದ್ದರು.
ಸ್ವಚ್ಛತೆಯಿಂದ ಪಾವಿತ್ರ್ಯತೆ
ಉತ್ಸವದ ಅಂಗವಾಗಿ ಶ್ರೀಮಠದ ಅನುಭವಮಂಟಪದಲ್ಲಿ ಆಯೋಜಿಸಿರುವ 6ನೇಯ ದಿನದ ಯೋಗ-ಆಧ್ಯಾತ್ಮದ ಕುರಿತು ಪ್ರಾ ತ್ಯಕ್ಷಿಕೆಯಲ್ಲಿ ಯೋಗಗುರು ಚನ್ನಬಸವಣ್ಣ ಅವರು ಮಾತನಾಡಿ,ಆಧುನಿಕತೆ ಹೆಚ್ಚಾದಂತೆ ಪ್ರಾಚೀನ ಕಾಲದ ಚಟುವಟಿಕೆಗಳು ಕಣ್ಮರೆಯಾ ಗುತ್ತಿವೆ. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಪಾವಿತ್ರ್ಯತೆ ಇರುತ್ತದೆ. ತನು,ಮನ,ಭಾವ ನಡವಳಿಕೆ ಶುದ್ಧವಾಗಿರ ಬೇಕೆಂದರು. ಡಾ.ಬಸವ ಕುಮಾರ ಸ್ವಾಮೀಜಿ ಮಾತನಾಡಿದರು. ಪ್ರಸನ್ನ ಕುಮಾರ್,ಬಸವರಾಜಪ್ಪ ಇತರರು ಇದ್ದರು.