ಚಿತ್ರದುರ್ಗ: ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಈ ಬಾರಿಯ ಶರಣಸಂಸ್ಕೃತಿ ಉತ್ಸವ-2023ರ ಗೌರವಾಧ್ಯಕ್ಷರನ್ನಾಗಿ ಅಥಣಿ ಶ್ರೀ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶ್ರೀಮಠದ ಆಡಳಿತಾಧಿಕಾರಿ,ಜಿಲ್ಲಾಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರ ಅಧ್ಯಕ್ಷತೆ ಹಾಗೂ ಶ್ರೀ ಬಸವಪ್ರಭು ಸ್ವಾ ಮೀಜಿ ಅವರ ಸಾನ್ನಿಧ್ಯದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಉತ್ಸವವನ್ನು ಅಕ್ಟೋಬರ್ 21ರಿಂದ 25 ರವರೆಗೆ ನಡೆಸಲು ತೀರ್ಮಾನಿಸಲಾಯಿತು.
ಶ್ರೀಮಠದ ಕಾರ‌್ಯನಿರ್ವಹಣಾಧಿಕಾರಿ ಎಂ.ಭರತ್‌ಕುಮಾರ್,ಬ್ಯಾಡಗಿ ವಿರಕ್ತಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ,ತಿಳುವಳ್ಳಿಯ ಶ್ರೀ ಬಸವನಿರಂಜನ ಸ್ವಾಮೀಜಿ, ಶ್ರೀಮಠದ ವ್ಯವಸ್ಥಾಪಕ ಆರ್.ಲಿಂಗರಾಜ್ ಇದ್ದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾಗಿ ಆಯ್ಕೆಯಾ ದ ಶ್ರೀಗಳನ್ನು ಗೌರವಿಸಲಾಯಿತು.