ಜಿಲ್ಲೆ

ಶರಣ ವಿಜಯೋತ್ಸವ, ಹುತಾತ್ಮ ದಿನಾಚರಣೆ ೧೫ರಿಂದ

ಬಸವಕಲ್ಯಾಣ: ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠ ಹಾಗೂ ಅಂತಾರಾಷ್ಟಿಯ ಲಿಂಗಾಯತ ಧರ್ಮ ಕೇಂದ್ರದಿಂದ ಅ.೧೫ರಿಂದ ೨೪ರ ವರೆಗೆ ನಡೆವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಯಶಸ್ವಿಯಾಗಿ ನಡೆಸಲು ವಿವಿಧ ಸಮಿತಿ ರಚಿಸಲಾಯಿತು.

ಹರಳಯ್ಯ ಗವಿಯಲ್ಲಿ ಭಾನುವಾರ ಪೂಜ್ಯ ಡಾ.ಗಂಗಾAಬಿಕಾ ಅಕ್ಕ ನೇತೃತ್ವದಲ್ಲಿ ಪೂರ್ವಭಾವಿ ಸಭೆಯಲ್ಲಿ ಸಮಾರಂಭ ಯಶಸ್ವಿಗೆ ಕೈಗೊಳ್ಳಬೇಕಾದ ಸಿದ್ಧತೆ ಕುರಿತು ಚರ್ಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಾಸಕ ಶರಣು ಸಲಗರ ಅವರನ್ನು ಆಯ್ಕೆ ಮಾಡಲಾಯಿತು. ಹಣಕಾಸು ಸಮಿತಿ, ದಾಸೋಹ ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ವಸತಿ ಸಮಿತಿ, ಸಾಂಸ್ಕೃತಿಕ ಸಮಿತಿ, ಮಹಿಳಾ ಸಮಿತಿ ಸೇರಿ ವಿವಿಧ ಸಮಿತಿ ರಚಿಸಲಾಯಿತು.

೧೫ ರಂದು ಬೆಳಗ್ಗೆ ೮ಕ್ಕೆ ಶ್ರೀ ನಿಜಗುಣಾನಂದ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪರುಷಕಟ್ಟೆವರೆಗೆ ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯದ ಮೆರವಣಿಗೆ ನಡೆಯಲಿದೆ. ೧೬ ರಂದು ಕೃಷಿ ವಿಚಾರ ಸಂಕೀರಣ, ೧೭ರಂದು ಬೆಳಗ್ಗೆ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಬಹುಭಾಷೆ ಕವಿಗೋಷ್ಠಿ. ಮೂರು ದಿನ ಬೆಳಗ್ಗೆ ೮ಕ್ಕೆ ಮಕ್ಕಳಿಗಾಗಿ ಇಷ್ಟಲಿಂಗಯೋಗ ೨೩ ರಂದು ಕೋಟೆಯಿಂದ ಹರಳಯ್ಯ ಗವಿವರೆಗೆ ಮೆರವಣಿಗೆ, ಪ್ರತಿ ದಿನ ವಚನ ಸಂಗೀತ ವಚನ ನೃತ್ಯ ನಾಟಕ ರೂಪಕ ಆಯೋಜಿಸಲು ನಿರ್ಧರಿಸಲಾಯಿತು.

ಅಕ್ಕಮಹಾದೇವಿ ಗವಿಯ ಸತ್ಯಕ್ಕತಾಯಿ, ಕಲ್ಯಾಣಮ್ಮ, ಮುಖಂಡರಾದ ಚಂದ್ರಕಾಂತ ಜಮಖಂಡಿ, ಸುಭಾಷ ರಗಟೆ, ರವೀಂದ್ರ ಕೋಳಕೂರ, ಶಿವಕುಮಾರ ಬಿರಾದಾರ, ಮಹಾದೇವ ಪಾಟೀಲ್ ಮಂಠಾಳ, ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ, ರಮೇಶ ಉಮ್ಮಾಪುರೆ, ಸುಲೋಚನಾ ಮಾಮಾ, ಸೋನಾಲಿ ನೀಲಕಂಠೆ, ಶ್ರೀದೇವಿ ಖಂಡಾಳ, ಮೀನಾ ಜಾಧವ್, ಪ್ರವೀಣ ಮಹಾಜನ ಇತರರಿದ್ದರು.