ಜಿಲ್ಲೆ

ಶನೇಶ್ಚರಸ್ವಾಮಿಯವರ ಬ್ರಹ್ಮ ದಿವ್ಯ ರಥೋತ್ಸವ

ಬೇಲೂರು: ಬೇಲೂರು ಪಟ್ಟಣ ಸಮೀಪದ ಭಿಷ್ಠಮ್ಮನವರ ಕೆರೆಕೋಡಿ ಮಲ್ಲಾಪುರ ಗ್ರಾಮದ ಶ್ರೀಶನೇಶ್ಚರಸ್ವಾಮಿಯವರ ಬ್ರಹ್ಮ ದಿವ್ಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಮಧ್ಯಾಹ್ನ ಅದ್ದೂರಿಯಾಗಿ ನೆರವೇರಿತು.


ಶ್ರೀಶನೇಶ್ಚರ ಸ್ವಾಮಿಯವರ ಬ್ರಹ್ಮ ದಿವ್ಯ ರಥೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆಯಿಂದಲೇ ವಿಶೇಷ ಹೋಮ, ಹವನ, ಪೂಜೆ ಮಹಾ ಮಂಗಳಾರತಿಯೊಂದಿಗೆ ಚಂದ್ರ ಮಂಡಲೋತ್ಸವ ಹಾಗೂ ಶನಿವಾರ ಮದ್ಯಾಹ್ನ 1 ರಿಂದ 2 ಗಂಟೆ ಸಮಯದ ವೃಷಭ ಲಗ್ನದಲ್ಲಿ ಮಹಾ ಮಂಗಳಾರತಿಯೊಂದಿಗೆ ಶನೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ವಿವಿಶ ಪುಷ್ಪಗಳಿಂದ ಅಲಂಕರಿಸಿದ್ದ ಪುಷ್ಪಾಲಂಕೃತ ರಥದಲ್ಲಿ ಕೂರಿಸಿದ ಬಳಿಕ ಗರುಡ ಪ್ರತ್ಯಕ್ಷವಾಗುತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭ್ರಹ್ಮ ದಿವ್ಯ ರಥೋತ್ಸವವನ್ನು ನೆರವೇರಿಸಲಾಯಿತು. ಈ ಸಂದರ್ಭ ಭಕ್ತರು ರಥವನ್ನು ಮುಟ್ಟಿ ನಮಸ್ಕರಿಸಿದರು.


ದೇವರ ಮೂರ್ತಿ ಇದ್ದ ರಥ ಮುಂದಕ್ಕೆ ಸಾಗುತಿದ್ದ ಸಂದರ್ಭ ಸಾವಿರಾರು ಭಕ್ತರು ದೇವರಿಗೆ ಬಾಳೇ ಹಣ್ಣು ಎಸೆದು ಭಕ್ತಿ ಪ್ರದರ್ಶಿಸಿ ಪುನೀತರಾದರು. ಮತ್ತು ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಶನೇಶ್ಚರಸ್ವಾಮಿ ದೇಗುಲ ಟ್ರಸ್ಟ್‌ನಿಂದ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ರಥೋತ್ಸವದಲ್ಲಿ ಶ್ರೀಶನೇಶ್ಚರಸ್ವಾಮಿ ದೇಗುಲ ಟ್ರಸ್ಟ್ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಸೇರಿದಂತೆ ದೇಗುಲ ಟ್ರಸ್ಟ್ ಪದಾಧಿಕಾರಿಗಳಿದ್ದರು.