ಜಿಲ್ಲೆ

ಶನಿವಾರ 78 ಜನ ಗುಣ

Gadag

ಗದಗ: ಜಿಲ್ಲೆಯಲ್ಲಿ ಶನಿವಾರ 94 ಜನರಿಗೆ ಕರೊನಾ ವೈರಸ್ ತಗುಲಿದ್ದು, 78 ಜನ ಸೋಂಕಿನಿಂದ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಗಳ ಸಂಖ್ಯೆ 2165ಕ್ಕೆ ಏರಿದೆ. ಸೋಂಕಿನಿಂದ ಜಿಲ್ಲೆಯಲ್ಲಿ ಒಟ್ಟು 46 ಜನ ಮೃತಪಟ್ಟಿದ್ದಾರೆ.

ಸೋಂಕು ದೃಢಪಟ್ಟ ಪ್ರದೇಶಗಳು: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಆರ್.ಕೆ.ನಗರ, ಬೆಟಗೇರಿಯ ಹೆಲ್ತ್ಕ್ಯಾಂಪ್, ವಿವೇಕಾನಂದ ನಗರ, ರಾಜೀವ ಗಾಂಧಿ ನಗರ, ಕುರಟ್ಟಿ ಪೇಟೆ, ಹಮಾಲರ ಕಾಲನಿ, ಜವಳ ಗಲ್ಲಿ, ವಕ್ಕಲಗೇರಿ ಓಣಿ, ಸಂಭಾಪುರ ರಸ್ತೆ, ಕೆ.ಇ.ಬಿ. ರಸ್ತೆ, ಹುಡ್ಕೋ ಕಾಲನಿ, ಹೊಸಪೇಟೆ ಚೌಕ, ಕಬಾಡಿ ರಸ್ತೆ, ವಿಜಯನಗರ ಹೈಸ್ಕೂಲ್ ಹತ್ತಿರ, ಗದಗ ತಾಲೂಕಿನ ಕಳಸಾಪುರ, ಬೆಳಹೋಡ, ಮಹಾಲಿಂಗಪುರ ತಾಂಡಾ, ಅಂತೂರ-ಬೆಂತೂರ, ಸೊರಟೂರ, ಶ್ಯಾಗೋಟಿ, ನಾಗಾವಿ, ಹಿರೇಹಾಳ, ಬಿಂಕದಕಟ್ಟಿ.

ರೋಣ ತಾಲೂಕಿನ ಹೊಸಳ್ಳಿ, ಹೊಳೆಆಲೂರ,ಯಾವಗಲ್, ಮಾರನಬಸರಿ.

ನರಗುಂದ ತಾಲೂಕಿನ ಅರಿಷಿಣಗೋಡಿ, ಸುರಕೋಡ. ಶಿರಹಟ್ಟಿ ತಾಲೂಕಿನ ಅಡರಹಳ್ಳಿ, ಮಾಗಡಿ, ಹುಲ್ಲೂರ, ಹೆಬ್ಬಾಳ, ಹೊಳೆ ಇಟಗಿ, ಬನ್ನಿಕೊಪ್ಪ, ಯತ್ನಳ್ಳಿ, ಶಿಗ್ಲಿ.

ಲಕ್ಷ್ಮೇಶ್ವರ ಪಟ್ಟಣದ ಸುಣಗಾರ ಓಣಿ. ಮುಂಡರಗಿ ಪಟ್ಟಣದ ಸತ್ಕಾರ ಹೋಟೆಲ್ ಹತ್ತಿರ, ಕಾವೇರಿ ಹೋಟೆಲ್ ಹತ್ತಿರ, ಭಜಂತ್ರಿ ಓಣಿ, ಪೇಠಾಲೂರ, ಮುಂಡರಗಿ ತಾಲೂಕಿನ ಹೀರೆವಡ್ಡಟ್ಟಿ. ಗಜೇಂದ್ರಗಡ ಪಟ್ಟಣದ ನೇಕಾರ ಕಾಲನಿಯಲ್ಲಿ ಸೋಂಕು ದೃಢಪಟ್ಟಿದೆ.

ಮೃತರ ವಿವರ: ಬೆಟಗೇರಿ ನಿವಾಸಿ 50 ವರ್ಷದ ಪುರುಷ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

94: ಇಂದಿನ ಸೋಂಕಿತರು

26843: ನಿಗಾದಲ್ಲಿ ಇರುವವರು:

27578: ಮಂದಿಯ ಗಂಟಲ್ ದ್ರವ ಸಂಗ್ರಹ

1073: ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಇರುವವರು:

2165: ಪಾಸಿಟಿವ್ ಪ್ರಕರಣಗಳು

1046: ಬಿಡುಗಡೆಯಾದವರು:

1073: ಸಕ್ರಿಯ ಪ್ರಕರಣಗಳು

186: ಬಾಕಿ ಇರುವ ವರದಿಗಳು:

25227: ನೆಗೆಟಿವ್ ಮಾದರಿಗಳು

46: ಮೃತರು