ಜಿಲ್ಲೆ

ಶನಿದೇವರ ದೇಗುಲದಲ್ಲಿ ವಿಶೇಷ ಪೂಜೆ

ಹೊಳೆನರಸೀಪುರ: ಪಟ್ಟಣದ ಬಳೆಗಾರರ ಬೀದಿಯ ಶನಿದೇವರ ದೇವಸ್ಥಾನದಲ್ಲಿ ಶನಿವಾರ 14ನೇ ವಾರ್ಷಿಕೋತ್ಸವ ವೈಭವದಿಂದ ಜರುಗಿತು.
ಮುಂಜಾನೆ ಬ್ರಾಹ್ಮೀ ಮಹೂರ್ತದಲ್ಲಿ ಗಣಪತಿ ಹೋಮ, ನವಗ್ರಹ ಹವನ, ಪಂಚಾಮೃತ ಅಭಿಷೇಕ, ತೈಲ ಮಜ್ಜನ ನಂತರ ವಿಶೇಷ ಅಲಂಕಾರ, ಸಹಸ್ರ ನಾಮಾರ್ಚನೆ, ಅಷ್ಟೋತ್ತರ ಸೇವೆ ನೆರವೇರಿತು. ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ, ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಸಂಜೆ ಗೋಧೂಳಿ ಲಗ್ನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶ್ರೀ ಸ್ವಾಮಿಯ ಉತ್ಸವ ಮತ್ತು ರಾತ್ರಿ ಶ್ರೀ ಶನಿಮಹಾತ್ಮೆ ಹರಿಕಥೆ ನೆರವೇರಿತು. ಹಿರಿಯ ಅರ್ಚಕ ಎಚ್.ಜೆ.ಗೋವಿಂದರಾಜು ಪೂಜಾ ಕೈಂಕರ್ಯದ ನೇತೃತ್ವ ವಹಿಸಿದ್ದರು.