ಜಿಲ್ಲೆ

ಶಕ್ತಿದೇವತೆಗಳ ಕಾರ್ತಿಕ ಮಹೋತ್ಸವ ಇಂದು

ಚಿತ್ರದುರ್ಗ: ಕೋಟೆನಗರಿಯ ಶಕ್ತಿದೇವತೆಗಳ ದೇಗುಲಗಳಲ್ಲಿ ಪ್ರಸಕ್ತ ಸಾಲಿನ ಕಡೇ ಕಾರ್ತಿಕ ಮಹೋತ್ಸವ ಡಿ. 8ರಂದು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮುಂದುವರೆದಿದೆ.

ಐತಿಹಾಸಿಕ ಕೋಟೆಯೊಳಗಿನ ಮೇಲುದುರ್ಗದ ಏಕನಾಥೇಶ್ವರಿ ದೇವಿ ಸನ್ನಿಧಿಯಲ್ಲಿ ಏಕನಾಥೇಶ್ವರಿ ಅಮ್ಮನವರ ಬಳಗದಿಂದ 8ರಂದು ಕಾರ್ತಿಕ ಮಹೋತ್ಸವ ಹಮ್ಮಿಕೊಂಡಿದ್ದು, ದೇವಿ ಮೂರ್ತಿಗೆ ವಿಶೇಷ ಪುಷ್ಪಾಲಂಕಾರ ಸೇವೆ ನಡೆಯಲಿದೆ ಎಂದು ದೇಗುಲ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದೊರೆಸ್ವಾಮಿ, ಮುಖಂಡರಾದ ಎಸ್‌ಬಿಎಲ್ ಮಲ್ಲಿಕಾರ್ಜುನ್, ರಾಮಜ್ಜ, ಅಂಗಡಿ ಹನುಮಂತ ತಿಳಿಸಿದ್ದಾರೆ.