ಶ್ರೀಶಕುನ ರಂಗನಾಥಸ್ವಾಮಿ ಜಾತ್ರೆ ಪ್ರಯುಕ್ತ ಗ್ರಾಮದ ಸುತ್ತಮುತ್ತಲು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ಮಂಗಳವಾರ ಸಖರಾಯಪಟ್ಟಣ ಪಿಎಸ್‌ಐಗೆ ಮನವಿ ಸಲ್ಲಿಸಿದರು. 
ಜಿಲ್ಲೆ

ಶಕುನ ರಂಗನಾಥಸ್ವಾಮಿ ಜಾತ್ರೆ ಮುಂಜಾಗ್ರತಾ ಕ್ರಮಕ್ಕೆ ಒತ್ತಾಯ

ಚಿಕ್ಕಮಗಳೂರು:

ಇತಿಹಾಸ ಪ್ರಸಿದ್ಧ ಶ್ರೀಶಕುನ ರಂಗನಾಥಸ್ವಾಮಿ ಜಾತ್ರೆ ಪ್ರಯುಕ್ತ ಗ್ರಾಮದ ಸುತ್ತಮುತ್ತಲು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ಮಂಗಳವಾರ ಸಖರಾಯಪಟ್ಟಣ ಪಿಎಸ್‌ಐಗೆ ಮನವಿ ಸಲ್ಲಿಸಿದರು.

ಈ ಬೇಳೆ ಬಜರಂಗದಳದ ಸುರಕ್ಷಾ ಪ್ರಮುಖ್ ಎಸ್.ಎಸ್.ನಿತಿನ್ ಮಾತನಾಡಿ, ಇದೇ ಜನವರಿ ೧೫, ೧೬, ೧೭ ಮತ್ತು ೧೮ ರಂದು ಶ್ರೀ ಶಕುನ ರಂಗನಾಥಸ್ವಾಮಿ ಬೃಹತ್ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಿಂದ ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದೆ ಎಂದರು.

ಆ ನಿಟ್ಟಿನಲ್ಲಿ ಜಾತ್ರೆ ಅಂಗವಾಗಿ ಭಕ್ತಾಧಿಗಳಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ, ಡ್ರೋನ್ ಬಳಕೆ ಮಾಡಬೇಕು. ಪ್ಲಾಸ್ಟಿಕ್ ನಿಷೇಧಿಸಬೇಕು ಹಾಗೂ ಕಳ್ಳತನವಾಗದಂತೆ ಕ್ರಮ ವಹಿಸಬೇಕು ಎಂದರು.

ವಾಹನ ನಿಲುಗಡೆಗೆ ಯಾವುದೇ ತರಹದ ತೊಂದರೆಯಾಗದAತೆ ಬ್ಯಾರಿಕೇಡ್ ಅಳವಡಿಸಿ ಟ್ರಾಫಿಕ್ ಸಂಚಾರವನ್ನು ನಿಯಂತ್ರಿಸಬೇಕು ಹಾಗೂ ಅನ್ಯ ಧರ್ಮಿಯರಿಂದ ನಿಂದಿಸುವುದು ಅಥವಾ ಯುವತಿಯರನ್ನು ರೇಗಿಸುವುದನ್ನು ತಡೆಗಟ್ಟಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಜರಂಗದಳ ಘಟಕದ ಸಂಯೋಜಕ ಎಸ್.ಜಿ.ಸಂಜಯ್, ಗೋರಕ್ಷಾ ಪ್ರಮುಖ್ ದರ್ಶನ್‌ನಾಯ್ಕ, ಮುಖಂಡರಾದ ಅಜಯ್, ವಿನಯ್, ಇಂದುಕಮಾರ್, ಯೋಗೇಶ್ ಪೂಜಾರಿ, ಸತೀಶ್ ನಾಯ್ಕ್, ಮೂರ್ತಿ, ಬಿಜೆಪಿ ಮುಖಂಡರಾದ ಮಿಥುನ್, ಸಚಿನ್ ಪಾದಮನೆ, ನಂದೀಶ್ ಮದಕರಿ ಮತ್ತಿತರರು ಹಾಜರಿದ್ದರು.