ಜಿಲ್ಲೆ

ಶಂಭುಲಿಂಗೇಶ್ವರ ರಥೋತ್ಸವ ಸಂಪನ್ನ

ಸಿರಗುಪ್ಪ: ಪಟ್ಟಣದಲ್ಲಿ ತುಂಗಭದ್ರಾ ನದಿ ತೀರದಲ್ಲಿರುವ ಐತಿಹಾಸಿಕ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಶಂಭುಲಿಂಗೇಶ್ವರ ಮಹಾರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶಂಭುಲಿಂಗೇಶ್ವರ ಸ್ವಾಮಿಗೆ ಬಂಗಾರ, ಬೆಳ್ಳಿ ಆಭರಣ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿ ಬ್ರಾಹ್ಮಿ ಮುಹೂರ್ತದಲ್ಲಿ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನಡೆಸಲಾಯಿತು. ತಿಮ್ಮಾಪುರ ಬಸಯ್ಯಸ್ವಾಮಿ ಅವರಿಂದ ವೀರಗಾಸೆ ವಡುಪು ಹಾಗೂ ತೆಕ್ಕಲಕೋಟೆ ರಾಚಯ್ಯ ಸ್ವಾಮಿ ಅವರಿಂದ ಸಮಾಳದೊಂದಿಗೆ ಅಗ್ನಿಕುಂಡ ಪುಟಾರಾಧನೆ ನಡೆದವು.

ನಂತರ ಶಂಭುಲಿಂಗೇಶ್ವರ ದೇವಸ್ಥಾನದಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ ನೂರಾರು ಮಹಿಳೆಯರು ವಿಜೃಂಭಣೆಯಿಂದ ಮಡಿತೇರು ಎಳೆದರು. ಸಂಜೆ 6 ಗಂಟೆಗೆ ಶಂಭುಲಿಂಗೇಶ್ವರ ಉತ್ಸವ ಮೂರ್ತಿಯೊಂದಿಗೆ ಮಹಾ ರಥೋತ್ಸವ ಜರುಗಿತು. ಶಂಭುಲಿಂಗೇಶ್ವರ ದೇವಸ್ಥಾನದ ಕಮಿಟಿ ಅಧ್ಯಕ್ಷ ವುಂತಗಲ್ ಅಮರೇಶಪ್ಪ, ಉಪಾಧ್ಯಕ್ಷ ಟಿ.ಎಂ.ಶಿವಕುಮಾರ ಸ್ವಾಮಿ, ಕಾರ್ಯದರ್ಶಿ ಶಂಭುಲಿಂಗಯ್ಯ ಗಾಣದಾಳಮಠ, ಖಜಾಂಚಿ ಅಮರೇಶ್ ಮಿಠಾಯಿ, ಪ್ರಧಾನ ಆರ್ಚಕ ವಿಶ್ವನಾಥ ಸ್ವಾಮಿ ಇದ್ದರು.