ಜಿಲ್ಲೆ

ಶಂಕರ್‌ನಾಗ್ ಪ್ರತಿಭಾವಂತ ನಟ : ಕಸಾಪ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಅಭಿಮತ

ಚಾಮರಾಜನಗರ : ಕನ್ನಡ ಚಲನಚಿತ್ರ ರಂಗದ ನಿರ್ದೇಶಕ, ನಟ, ನಿರ್ಮಾಪಕ, ಕಿರುತೆರೆ ಮೂಲಕ ಇಡೀ ಭಾರತದಲ್ಲಿ ಅಪಾರ ಕೀರ್ತಿಗಳಿಸಿದ ಶಂಕರ್ ನಾಗ್ ಅವರ 32ನೇ ಸಂಸ್ಮರಣಾ ಕಾರ್ಯಕ್ರಮವನ್ನು ನಗರದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಅವರ ಅಭಿಮಾನಿಗಳ ಒಕ್ಕೂಟದ ವತಿಯಿಂದ ಶುಕ್ರವಾರ ಆಚರಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಶಂಕರ್ ನಾಗ್ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭಾವಂತ. ಅವರ ದೂರ ದೃಷ್ಟಿ, ತಂತ್ರಜ್ಞಾನ, ಕನ್ನಡ ಚಿತ್ರರಂಗ ಎಂದು ಮರೆಯಲಾಗದು ಎಂದರು.


ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ನಾಗ್ ಹರದನಹಳ್ಳಿ ಮಾತನಾಡಿ, ಶಂಕರ್ ನಾಗ್ ಅವರ ಹೆಸರಿನಲ್ಲಿ ನ.9 ರಂದು ಶಂಕರ ನಾಗ್ ಪ್ರಶಸ್ತಿಯನ್ನು ಸಾಧಕರಿಗೆ ನೀಡಲಾಗುವುದು. ಕನ್ನಡ ಚಿತ್ರರಂಗದ ಮಹಾನ್ ವ್ಯಕ್ತಿತ್ವ ಹೊಂದಿದ ಶಂಕರ್ ನಾಗ್ ಎಂದೆಂದೂ ಅಮರ. ಅವರ ಸಾಮಾಜಿಕ ಮೌಲ್ಯಗಳು ,ಚಿಂತನೆ ನಮ್ಮೆಲ್ಲರಿಗೂ ಸದಾ ಆದರ್ಶವಾಗಿದೆ ಎಂದರು.