ಜಿಲ್ಲೆ

ಶಂಕರಗೌಡ್ರ ಅಧ್ಯಕ್ಷ, ಮಲ್ಲಪ್ಪ ಉಪಾಧ್ಯಕ್ಷ

ನರಗುಂದ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೂರನೇ ಅವಧಿಗೆ ಅಧ್ಯಕ್ಷರಾಗಿ ಕೊಣ್ಣೂರಿನ ಶಂಕರಗೌಡ ಯಲ್ಲಪ್ಪಗೌಡ್ರ, ಉಪಾಧ್ಯಕ್ಷರಾಗಿ ಮಲ್ಲಪ್ಪ ಭೋವಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿ, ತಹಸೀಲ್ದಾರ್ ಎ.ಎಚ್. ಮಹೇಂದ್ರ ಅವರು ಅಭ್ಯರ್ಥಿಗಳ ಆಯ್ಕೆ ಅವಿರೋಧವೆಂದು ಘೊಷಿಸಿದರು.

ನೂತನ ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ್ರ ಮಾತನಾಡಿ, ನರಗುಂದ ಎಪಿಎಂಸಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಮುಂದೆ ಸಾಧಿಸಬೇಕಾಗಿರುವ ಕೆಲ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಪಕ್ಷದ ವರಿಷ್ಠರು ಹಾಗೂ ಎಲ್ಲ ಹಿರಿ, ಕಿರಿಯ ಸದಸ್ಯರು, ಮುಖಂಡರ ಸಲಹೆ ಮೇರೆಗೆ ಕೈಗೊಳ್ಳುವುದಾಗಿ ತಿಳಿಸಿದರು. ಉಪಾಧ್ಯಕ್ಷ ಮಲ್ಲಪ್ಪ ಭೋವಿ ಮಾತನಾಡಿದರು. ಹನುಮಂತ ಹದಗಲ್, ಬಿ.ಕೆ. ಗುಜಮಾಗಡಿ, ಎನ್.ವಿ. ಮೇಟಿ, ಚಂಬಣ್ಣ ವಾಳದ, ಗುರುನಾಥಗೌಡ ಹುಡೇದಮನಿ, ಸಣ್ಣಗದಿಗೆಪ್ಪ ತಳವಾರ, ಗಂಗೂಬಾಯಿ ಕಾಶೀದ, ವೆಂಕನಗೌಡ ಪಾಟೀಲ, ರುದ್ರಗೌಡ ಆಡೂರ ಇತರರಿದ್ದರು.

EndFragment