ಮೈಸೂರು: ವ್ಹೀಲಿಂಗ್ ಖಯಾಲಿಗಾಗಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಯುವಕರನ್ನು ಕುವೆಂಪುನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2.50 ಲಕ್ಷ ರೂ.ಮೌಲ್ಯದ 4 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.
ಜ್ಯೋತಿನಗರದ ನಿವಾಸಿ ಧನುಷ್ (19) ಮತ್ತು ಸುಣ್ಣದ ಕೇರಿಯ ನಿವಾಸಿ ನಿತಿನ್(19) ಬಂಧಿತರು. ಶ್ರೀರಾಂಪುರದಲ್ಲಿ ಹೀರೋ ಹೋಂಡಾ ಸಿಡಿ ಡಾನ್ ಬೈಕ್ ಅನ್ನು ಆರೋಪಿಗಳು ಕಳ್ಳತನ ಮಾಡಿದ್ದರು. ಅದೇ ಬೈಕ್‌ನಲ್ಲಿ ಮತ್ತೊಂದು ಬೈಕ್ ಅನ್ನು ಕಳವು ಮಾಡಲು ಸಂಚು ರೂಪಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ವ್ಹೀಲಿಂಗ್ ಶೋಕಿಗಾಗಿ ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ವಿದ್ಯಾರಣ್ಯಪುರಂ, ಕುವೆಂಪುನಗರ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ, ಆಲನಹಳ್ಳಿ ಠಾಣೆಯಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.
ಕುವೆಂಪುನಗರ ಠಾಣೆಯ ಇನ್ಸ್‌ಪೆಕ್ಟರ್ ಅರುಣ್ ನೇತೃತ್ವದಲ್ಲಿ ಪಿಎಸ್‌ಐ ರಾಧಾ, ಗೋಪಾಲ್ ಹಾಗೂ ಸಿಬ್ಬಂದಿ ಆನಂದ್, ಮಂಜುನಾಥ್, ಪುಟ್ಟಪ್ಪ, ಹಜರತ್, ಸುರೇಶ್, ನಾಗೇಶ್, ಯೋಗೇಶ್, ಸತೀಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.