ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಗ್ರಾಮದ ಅರಸು ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ತಾಲೂಕು ನವ ಜೀವನ ಸಮಿತಿ ಮತ್ತು ಶೌರ್ಯ ವಿಪತ್ತು ಘಟಕದಿಂದ ಆಯೋಜಿಸಿದ್ಧ ಗಾಂಧಿ ಸ್ಮÊತಿ ಮತ್ತು ಜನಜಾಗೃತಿ ಸಮಾವೇಶದಲ್ಲಿ ಭಾಗಿಯಾದ ಶಾಸಕ ಎಚ್.ಡಿ.ತಮ್ಮಯ್ಯ ಅವರನ್ನು ಅಭಿನಂದಿಸಲಾಯಿತು. ಅನಿಲ್ ಆನಂದ್, ದೇವರಾಜ್, ಭಾಗ್ಯ, ಸದಾನಂದ ಬಂಗೇರ ಮತ್ತಿತರರಿದ್ದರು.  
ಜಿಲ್ಲೆ

ವ್ಯಸನಮುಕ್ತ ಭಾರತ ನಿರ್ಮಾಣ ನಮ್ಮೆಲ್ಲರ ಕನಸು

ಚಿಕ್ಕಮಗಳೂರು: ವ್ಯಸನ ಮುಕ್ತ ಭಾರತವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲ ರ ಕನಸು. ಸುಭದ್ರ ರಾಷ್ಟç ನಿರ್ಮಾಣ ಮಾಡುವ ಗುರಿ ಹೊತ್ತ ಜನಜಾಗೃತಿ ವೇದಿಕೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವೆ ಶ್ಲಾಘನೀಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ತಾಲೂಕಿನ ಕರ್ತಿಕೆರೆ ಗ್ರಾಮದ ಅರಸು ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ತಾಲೂಕು ನವ ಜೀವನ ಸಮಿತಿ ಮತ್ತು ಶೌರ್ಯ ವಿಪತ್ತು ಘಟಕದಿಂದ ಆಯೋಜಿಸಿದ್ಧ ಗಾಂಧಿ ಸ್ಮÊತಿ ಮತ್ತು ಜನಜಾಗೃತಿ ಸಮಾವೇಶ ಉದ್ಘಾ ಟಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್ನ ಕಾರ್ಯಕ್ರಮಗಳು ಮಹಿಳೆಯರು ಸ್ವಾವಲಂಭಿಯನ್ನಾಗಿಸುವ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜದ ಒಳಿತಿಗಾಗಿ ದುಡಿಯುತ್ತಿರುವುದು ಉತ್ತಮ ವಿಚಾರ. ಅಲ್ಲದೆ ಕುಟುಂಬಕ್ಕೆ ಮಾರಕವಾಗಿರುವ ಮದ್ಯವ್ಯಸನಿಗಳ ಬದುಕನ್ನು ಹಸನಗೊಳಿಸಲು ಶ್ರಮಿಸುತ್ತಿರುವ ಕಾರ್ಯ ಉತ್ತಮವಾಗಿದೆ ಎಂದು ತಿಳಿಸಿದರು.

ಮಹತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಗಾಂಧೀಜಿ ನಡೆಯುವ ಹಾದಿಯಲ್ಲಿ ನಡೆದು ಸಮಾಜವನ್ನು ದುಶ್ಚಟ ಮುಕ್ತವಾಗಿ ಕೊಂಡೊಯ್ಯುವಲ್ಲಿ ಶ್ರಮಿಸುತ್ತಿರುವ ಪೂಜ್ಯವೀರೇಂದ್ರ ಹೆಗ್ಗಡೆಯವರ ಕಾರ್ಯ ಹೆಮ್ಮೆ ಪಡುವಂತಹದ್ದು ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್ನ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ಧರ್ಮಸ್ಥಳದ ಹಣತೆ ಪ್ರತಿಯೊಬ್ಬರ ಮನೆಯಲ್ಲಿ ಬೆಳಗುವಂತಾಗಲಿ. ನಮ್ಮ ಧ್ವನಿ ಶ್ರೀಮಂಜುನಾಥಸ್ವಾಮಿ ಸನ್ನಿಧಿಗೆ ಮುಟ್ಟಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ನವಜೀವನ ಜಾಥಾಕ್ಕೆ ಚಾಲನೆ ನೀಡಿದರು. ಪಾನಮುಕ್ತರಾಗಿ ಹೊಸ ಜೀವನವನ್ನು ಕಟ್ಟಿಕೊಂಡ ಸದಸ್ಯರು ತಮ್ಮ ಅನಿಸಿಕೆ ಹಂಚಿಕೊAಡವರಿಗೆ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಇದೇ ವೇಳೆ ಸಮಾವೇಶದ ಹಕ್ಕೋತ್ತಾಯಗಳನ್ನು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರು ಶಾಸಕರಿಗೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರ ದೇವರಾಜ್, ಸಂಪನ್ಮೂಲ ವ್ಯಕ್ತಿ ಮೋಹನ್‌ರಾಜ್‌ಅರಸ್, ತಾಪಂ ಮಾಜಿ ಅಧ್ಯಕ್ಷ ಕನಕರಾಜ್‌ಅರಸ್, ಎಪಿಎಂಸಿ ವ್ಯಾಪಾರಿ ರುದ್ರೇಶ್, ಗ್ಯಾರಂಟಿ ಪ್ರಾಧಿಕಾರದ ಸದಸ್ಯ ನಾಗರಾಜ್, ದಶರಥ ರಾಜ್ ಅರಸ್, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯರಾದ ಅನಿಲ್‌ಆನಂದ್, ಕುಮಾರ್‌ಶೆಟ್ಟಿ, ಮುಖಂಡರಾದ ರಾಮರಾಜ್‌ಅರಸ್, ಆನಂದರಾಜ್‌ಅರಸ್, ಮಲ್ಲೇಶ್ ಕೋಟೆ, ತಾಲೂಕು ಯೋಜನಾಧಿಕಾರಿ ರಮೇಶ್ ನಾಯ್ಕ್, ಮೇಲ್ವಿಚಾರಕಿ ರೂಪಾ ಮತ್ತಿತರರು ಉಪಸ್ಥಿತರಿದ್ದರು.