ಬಾಗಲಕೋಟೆ: ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಕೈ ಜೋಡಿಸಬೇಕಾಗಿದೆ ಎಂದು ಬಿವಿವಿ ಸಂಘದ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಪೂರ್ಣಿಮಾ ಮೇಟಿ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಯುವಕರು ಹಲವಾರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕುತೂಹಲಕ್ಕಾಗಿ ಯಾರೊಬ್ಬರೂ ಮಾದಕ ದ್ರವ್ಯ ಬಳಸಬಾರದು. ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಚಿಕಿತ್ಸೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಂತೆ ಮಾಡುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದರು.
ಪ್ರಾಚಾರ್ಯ ಡಾ.ಜಗನ್ನಾಥ ವಿ ಚವ್ಹಾಣ ಮಾತನಾಡಿ, ಒಬ್ಬ ವ್ಯಕ್ತಿ ದುಶ್ಚಟಕ್ಕೆ ಬಲಿಯಾಗಲು ಪ್ರಮುಖ ಕಾರಣಗಳನ್ನು ಮತ್ತು ಅದು ಹಂತ ಹಂತವಾಗಿ ಹೇಗೆ ಬಲಿಪಶು ಆಗುತ್ತಾನೆ ಎಂಬುದರ ಕುರಿತು ಮಾಹಿತಿ ನೀಡಿದರು.
ಪದವಿ ಪೂರ್ವ ವಿಭಾಗದ ಸಂಯೋಜಕ ಗಿರಿಜಾ ಶೆಲ್ಲಿಕೇರಿ, ಎನ್.ಎಸ್.ಎಸ್. ಘಟಕದ ಸಂಯೋಜನಾಽಕಾರಿ ಪ್ರಕಾಶ ತಿಪ್ಪಣ್ಣವರ ಉಪಸ್ಥಿತರಿದ್ದರು. ಕವಿತಾ ಪಾಟೀಲ ಪ್ರತಿಜ್ಞಾವಿಽ ಬೋಽಸಿದರು. ಮೀನಾಕ್ಷಿ ಚವ್ಹಾಣ ಸ್ವಾಗತಿಸಿದರು. ಭಾಗ್ಯ ಹಡಪದ ವಂದಿಸಿದರು. ಲಕ್ಷಿ÷್ಮÃ ಪಟತ್ತಾರ್ ನಿರೂಪಿಸಿದರು.