ಜಿಲ್ಲೆ

ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿಗೆ 14.96 ಲಕ್ಷ ರೂ. ಲಾಭ

ತಿ.ನರಸೀಪುರ: ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿಯು ಪ್ರಸಕ್ತ ಸಾಲಿನಲ್ಲಿ 14.96 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಮಿತಿಯ ಅಧ್ಯಕ್ಷ ಟಿ.ಪಿ.ಸುಬ್ರಹ್ಮಣ್ಯ ತಿಳಿಸಿದರು.

ಪಟ್ಟಣದ ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸದಸ್ಯರ ಸಹಕಾರದೊಂದಿಗೆ ಸಂಘವು ಲಾಭದತ್ತ ಮುನ್ನಡೆಯುತ್ತಿದೆ. ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ವೇಳೆ ನಷ್ಟದಲ್ಲಿದ್ದ ಸಂಘವನ್ನು ಲಾಭದತ್ತ ಕೊಂಡೊಯ್ಯಲು ಸದಸ್ಯರ ಸಹಕಾರ ಕಾರಣವಾಗಿದೆ. ಮುಂದೆಯೂ ಸದಸ್ಯರ ಸಹಕಾರ ಬಯಸುತ್ತೇನೆ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಜಿ.ರಘುನಂದನ್ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಮಲ್ಲಣ್ಣ, ನಿರ್ದೇಶಕರಾದ ಟಿ.ವಾಸುದೇವ, ಬಿ.ಎಸ್.ಮಹೇಶ್, ಎನ್.ಮೋಹನ್, ಬಿ.ಶಿವಸ್ವಾಮಿ, ಎಸ್.ರಾಜಮ್ಮ, ಎಂ.ಎಸ್.ಜಯಣ್ಣ, ಎಂ.ಎಸ್.ಬಸವರಾಜು, ಡಿ.ಕೋಮಲಾ ಕುಮಾರಸ್ವಾಮಿ, ಎಚ್.ವಿ.ಚೈತ್ರಾ ಗಿರೀಶ್, ಎಚ್.ಬಿ.ಶಾರದ, ಕಚೇರಿ ಸಹಾಯಕಿ ಟಿ.ಜಿ.ಸುಮಿತ್ರಾ, ಎನ್.ಮಹೇಶ್, ಡಿ.ಪಿ.ಸಂದೇಶ್, ಸಾವಿತ್ರಮ್ಮ, ಶ್ರೀಧರ ಸ್ವಾಮಿ, ವೈ.ಎನ್.ಶಂಕರೇಗೌಡ ಇತರರು ಇದ್ದರು.