ಜಿಲ್ಲೆ

ವ್ಯಕ್ತಿಯೊಬ್ಬರ ಖಾತೆಗೆ ನಿಗಮದ ಹಣ ವರ್ಗಾವಣೆ

ಬಳ್ಳಾರಿ : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ತಾಲೂಕಿನ ಕೃಷ್ಣನಗರ ಕ್ಯಾಂಪ್ ನಿವಾಸಿ ಶ್ರೀನಿವಾಸ್ ರಾವ್ ಅವರ ಖಾತೆಗೆ ಹತ್ತು ಲಕ್ಷ ರೂ. ವರ್ಗಾವಣೆಯಾಗಿದೆ. ಈಗಾಗಲೇ ಹಣ ವರ್ಗಾವಣೆಯಾದ 200 ಜನರ ಪಟ್ಟಿಯಲ್ಲಿ 77ನೇ ವ್ಯಕ್ತಿ ಶ್ರೀನಿವಾಸ್ ಕೂಡ ಒಬ್ಬರು. ನನ್ನ ಬ್ಯಾಂಕ್ ಖಾತೆಗೆ ಹತ್ತು ಲಕ್ಷ ರೂ. ಹಣ ವರ್ಗಾವಣೆಯಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಎಂದು ‌ನನಗೆ ಗೊತ್ತಿಲ್ಲ. ಕೆಲ ತಿಂಗಳ ಹಿಂದೆ ಸ್ನೇಹಿತರೊಬ್ಬರಿಗೆ ಸಾಲ ನೀಡಿದ್ದೆ, ಅವರೇ ಮರಳಿ ನನ್ನ ಖಾತೆಗೆ ಜಮೆ ಮಾಡಿದ್ದಾರೆ ಎಂದುಕೊಂಡಿದ್ದೆ. ಈ ಹಣದ ಬಗ್ಗೆ ನನಗೆ ಏನು ತಿಳಿದಿಲ್ಲ ಎಂದು ಶ್ರೀನಿವಾಸ್ ರಾವ್ ಎಸ್ ಐಟಿ ಮುಂದೆ ಹೇಳಿದ್ದಾರೆ. ಈಗಾಗಲೇ ಎಸ್ ಐಟಿ ಅಧಿಕಾರಿಗಳು ಹಣ ಮರಳಿ ಒಪ್ಪಿಸುವಂತೆ ಸೂಚಿಸಿದ್ದಾರೆ. ಬಳಸಿಕೊಂಡು ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿರುವ ನಾಗೇಶ್ವರ ರಾವ್ ಮೂಲತಃ ಕೃಷ್ಣ ನಗರ ಕ್ಯಾಂಪ್ ನಿವಾಸಿಯಾಗಿದ್ದು, ವಾಸ್ತವದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈತ ಆರೋಪಿ ನೆಕ್ಕಂಟಿ ನಾಗರಾಜ್ ಅವರ ಸ್ವಂತ ಮಾವ ಕೂಡ. ಮಾವ ಮತ್ತು ಅಳಿಯ ಸೇರಿ ವಾಲ್ಮೀಕಿ ನಿಗಮದ ಹಣವನ್ನು ಬಳ್ಳಾರಿ ನಗರ ಮತ್ತು ಗ್ರಾಮೀಣ ಪ್ರದೇಶದ ಹಲವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಕೂಡಯಿದೆ.