ಬಾಗಲಕೋಟೆ: ವ್ಯಕ್ತಿಯಲ್ಲಿ ಪ್ರತಿಭೆ ಇರುವದಿಲ್ಲ, ವ್ಯಕ್ತಿತ್ವದಲ್ಲಿ ಪ್ರತಿಭೆ ಇರುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಬಾಗಲಕೋಟ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ. ಹೇಳಿದರು.
ನಗರದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೨೦೨೨-೨೩ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾನೂನು ವಿದ್ಯಾರ್ಥಿಗಳು ಒಳ್ಳೆಯ ನ್ಯಾಯವಾದಿಯಾಗಬೇಕಾದರೆ ಜ್ಞಾನ, ಶಿಸ್ತು, ಸತತ ಅಧ್ಯಯನ ಮತ್ತು ಧೈರ್ಯ ಅವಶ್ಯಕವಾಗಿದೆ. ಕೇವಲ ಹಣಗಳಿಕೆಯೊಂದೇ ವಕೀಲ ವೃತ್ತಿಯ ಉದ್ದೇಶವಲ್ಲ. ದೇಶದಲ್ಲಿ ಜಾರಿಯಲ್ಲಿರುವ ಕಾನೂನುಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವದರೊಂದಿಗೆ ಬಾಧಿತ ವ್ಯಕ್ತಿಗಳಿಗೆ ಕಾನೂನು ನೆರವು ನೀಡುವುದು ಕೂಡಾ ವಕೀಲ ವೃತ್ತಿಯ ಉದ್ದೇಶವಾಗಿದೆ ಎಂದರು.
ವೃತ್ತಿಯು ಎಲ್ಲರಿಗೂ ಸಮಾನವಾದ ಅವಕಾಶವನ್ನು ನಿಡುತ್ತದೆ. ಆ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು. ಒಳ್ಳೆಯ ವಕೀಲರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿಸಿದರು.
ಪ್ರಾಚಾರ್ಯ ಡಾ.ಎಂ.ಪಿ.ಚಂದ್ರಿಕಾ ಮಾತನಾಡಿ, ವಕೀಲ ವೃತ್ತಿಯು ಶ್ರೇಷ್ಠ ವೃತ್ತಿಯಾಗಿದ್ದು, ವಿದ್ಯಾರ್ಥಿಗಳು ಶ್ರದ್ಧೆ, ಸತತ ಅಧ್ಯಯನ ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡಿ ಶ್ರೇಷ್ಠ ವಕೀಲರಾಗಿ, ನ್ಯಾಯಾಧೀಶರಾಗಿ ಸಮಾಜ ಸೇವೆ ಮಾಡಬೇಕು ಎಂದು ಹೇಳಿದರು.
ಪ್ರೊ.ಭವಾನಿ ಪಾಟೀಲ, ಪ್ರೊ.ಸುಧೀಂದ್ರ ಹಾಗೂ ಧೈಹಿಕ ಶಿಕ್ಷಣ ನಿರ್ದೇಶಕ ಐ.ಎಂ.ತಾಳಿಕೋಟಿ.ಐಶ್ವರ್ಯ ಲಿಂಗದ ಪ್ರಾರ್ಥಿಸಿದರು. ಪ್ರೊ.ಶರಣಬಸವ ಸ್ವಾಗತಿಸಿದರು. ಪ್ರೊ.ರವಿಚಂದ್ರ ಕುಂಬಾರ ವಾರ್ಷಿಕ ವರದಿ ವಾಚಿಸಿದರು. ವಿದ್ಯಾಶ್ರೀ ಮೂಲಿಮನಿ ವಂದಿಸಿದರು. ಈಶ್ವರ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.