ಬಾಗಲಕೋಟೆ: ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಪಾತ್ರ ವಹಿಸುವ ಕ್ರೀಡೆ ಮತ್ತ್ತು ಸಾಂಸ್ಕೃತಿಕ ಚಟುವಟಿಕೆಗಳು ನಾಗರಿಕ ಸಮಾಜದಲ್ಲಿ ಪರಿಪೂರ್ಣತೆ ಸಾಽಸಲು ಸಹಕಾರಿಯಾಗಿವೆ. ವ್ಯಕ್ತಿತ್ವದ ವಿಕಾಸವೇ ವಿದ್ಯಾರ್ಥಿಗಳ ಧ್ಯೇಯವಾಗಬೇಕು. ಆ ದಿಶೆಯಲ್ಲಿ ಅವರು ಪ್ರಯತ್ನಶೀಲರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪುರ ಕಲಾ ಮತ್ತು ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಪ್ರಸಕ್ತ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಸ್ಥ ಶರೀರ ಮತ್ತು ಸ್ವಚ್ಛ ಮನಸ್ಸನ್ನು ಹೊಂದಲು ಪಾಠದ ಜೊತೆಗೆ ಆಟಗಳೂ ಬೇಕು. ದೇಹ ಸುಂದರವಾಗಿದ್ದರಷ್ಟೇ ಸಾಲದು. ಅದು ಸೌಖ್ಯವಾಗಿರಬೇಕು. ಆರೋಗ್ಯ ಪೂರ್ಣ ಶರೀರವಿದ್ದಲ್ಲಿ ಮಾತ್ರ ಜೀವನದಲ್ಲಿ ಸಾಧನೆ ಮಾಡಬಹುದು. ಹೀಗಾಗಿ ವಿದ್ಯಾರ್ಥಿಗಳು ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.
ಕಲಿಕೆ ನಿರಂತರವಾದದ್ದು. ಜ್ಞಾನ ಸಂಪಾದನೆ ಜೀವನದಲ್ಲಿ ಸಾಧನೆಗೆ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನೂ ಪಡೆದಲ್ಲಿ ಅರ್ಥಪೂರ್ಣ ಜೀವನವನ್ನು ಸಾಗಿಸಬಹುದು. ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದ ಅವರು ಜೀವನದಲ್ಲಿ ಪಾಠ ಕಲಿಸುವ ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ಸಕ್ರಿ ಪ್ರೌಢ ಶಾಲೆಯ ಆ ಗುಣಮಟ್ಟದ ಶಿಕ್ಷಣವನ್ನು ಮೆಲಕು ಹಾಕಿದ ಅವರು, ಈ ವಿದ್ಯಾ ಸಂಸ್ಥೆಯ ಬೆಳವಣಿಗೆಗೆ ಅವಶ್ಯಕ ನೆರವು ನೀಡುವ ಭರವಸೆ ನೀಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಲತಾ ಹೆರಂಜಲ, ಪದೋನ್ನತಿ ಪಡೆದ ಡಾ.ಎಸ್.ಎಸ್.ಹಂಗರಗಿ, ಯುಜಿಸಿ ನೆಟ್ ಪರೀಕ್ಷೆ ತೇರ್ಗಡೆಯಾದ ಕೆ.ಜಿ.ಲಮಾಣಿ, ಸೇವಾ ನಿವೃತ್ತಿ ಹೊಂದಿದ ಎಂ.ಎನ್.ಕಾಠೇವಾಡಿ ಹಾಗೂ ರಾಷ್ಟಿçÃಯ ರಾಕ್ ಕ್ಲೆÊಂಬಿAಗ್ ಕ್ಯಾಂಪ್‌ನಲ್ಲಿ ಭಾಗಿಯಾದ ಎನ್.ಸಿ.ಸಿ ಕೆಡೆಟ್ ಮಹಾಲಿಂಗಪ್ಪ ಗೌಡರ ಅವರನ್ನು ಇದೇ ಸಂದರ್ಭದಲ್ಲಿ ಅವರು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.
ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಈ ವೇದಿಕೆ ಸೂಕ್ತವಾಗಿದೆ. ಕಾಲೇಜಿನಲ್ಲಿ ಲಭ್ಯವಾಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಡಾ.ಗಿರೀಶ ಮಸೂರಕರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಉಪವಿಭಾಗದ ಅಧ್ಯಕ್ಷ ಡಾ.ಪಿ.ಆರ್.ಜೋಶಿ, ಸಂಯೋಜಕ ಡಾ.ಎಸ್.ಎಸ್.ಹಂಗರಗಿ, ಪ್ರಧಾನ ಕಾರ್ಯದರ್ಶಿ ಶ್ರವಣಾ ಸಿದ್ನಾಳ, ಉಪಾಧ್ಯಕ್ಷ ಜಿ.ಎನ್.ಕುಲಕರ್ಣಿ, ಜಂಟೀ ಕಾರ್ಯದರ್ಶಿ ಡಾ.ಎಸ್.ಬಿ.ಪರ್ವತೀಕರ, ಸದಸ್ಯ ಡಾ.ಜೆ.ಎಸ್.ದೇಶಪಾಂಡೆ, ಪಿ.ಯು.ಕಾಲೇಜಿನ ಪ್ರಾಚಾರ್ಯ ಅಶೋಕ ಕಂದಗಲ್ ,ನಿವೃತ್ತ ಪ್ರಾಧ್ಯಾಪಕ ಜಿ.ಜೆ.ಮೊರಬ, ಡಾ.ಎಸ್.ಜಿ.ನಾವಲಗಿ, ಡಾ.ವಿ.ಎಸ್.ಮಠ ಮತ್ತಿತರರು ಉಪಸ್ಥಿತರಿದ್ದರು. ಸ್ವಪ್ನಾ ಗೌಡರ, ದಿವ್ಯಶ್ರೀ ಬಿಲ್ಲಾರ ಪ್ರಾರ್ಥಿಸಿದರು.ಎಸ್.ಎಂ.ಹಡಪದ ವಂದಿಸಿದರು. ಎಂ.ಡಿ.ಕೋರವಾರ ನಿರೂಪಿಸಿದರು.