ಮೂಡಲಗಿ: ಸಮಾಜ ಸೇವೆ ವಿದ್ಯಾರ್ಥಿಗಳ ಜೀವನದಲ್ಲಿ ಸ್ಫೂರ್ತಿದಾಯಕ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯಕವಾಗಿದ್ದು, ಗ್ರಾಮೀಣ ಮತ್ತು ನಗರ ಸಮಾಜದ ನೈಜ ಅರಿವು ಪಡೆದುಕೊಳ್ಳಲು ಎನ್ಎಸ್ಎಸ್ ನಂತಹ ಸಾಮಾಜಿಕ ಸಂಟನೆಗಳ ಪಾತ್ರ ಮಹತ್ವದಾಗಿದೆ ಎಂದು ಮುನ್ಯಾಳ ಗ್ರಾಪಂ ಮಾಜಿ ಅಧ್ಯಕ್ಷ ಗೋವಿಂದ ವಂಟಗೋಡಿ ಹೇಳಿದರು.
ಪಟ್ಟಣದ ಆರ್ಡಿಎಸ್ ಕಲಾ ವಾಣಿಜ್ಯ ವಿಜ್ಞಾನ ಹಾಗೂ ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್ಎಸ್ಎಸ್ ಕೋಶದ ವತಿಯಿಂದ ದತ್ತು ಗ್ರಾಮ ಮುನ್ಯಾಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎನ್ಎಸ್ಎಸ್ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ನಾಯಕತ್ವದ ಗುಣದ ಜತೆಗೆ ಸಂಟನಾತ್ಮಕ ಪ್ರವೃತ್ತಿ ಬೆಳೆಯುತ್ತದೆ ಎಂದರು. ಮುನ್ಯಾಳದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎ.ಎ.ಪೀರಜಾದೆ, ಆರ್ಡಿಎಸ್ ಕಾಲೇಜ್ ಪ್ರಾಚಾರ್ಯ ಸತ್ಯೆಪ್ಪ ಗೋಟೂರೆ ಮಾತನಾಡಿದರು.
ಗ್ರಾಪಂ ಅಧ್ಯೆ ದುರ್ಗವ್ವ ಜಂಬಗಿ, ದಯಾನಂದ ನಾಯ್ಕ, ಮಡೆಪ್ಪ ಒಡೆಯರ, ಶ್ರೀಶೈಲ ಸೂರನ್ನವರ, ಅಶೋಕ ಚಿಕ್ಕೋಡಿ, ಮುತ್ತು ಒಡೆಯರ, ಸಂಜು ಹಿರೇಹೊಳಿ, ಮಡೆಪ್ಪ ಮದಿಹಳ್ಳಿ, ಸುಭಾಷ ಮಾಲೋಜಿ, ಉಮೇಶ ಪುಟ್ಟಿ ಇತರರು ಇದ್ದರು. ಪಿ.ಬಿ.ಚೌಡಕಿ ಸ್ವಾಗತಿಸಿದರು. ಸಂಜೀವ ಮಂಟೂರ ನಿರೂಪಿಸಿದರು. ರಾಜು ಪತ್ತಾರ ವಂದಿಸಿದರು.