ಜಿಲ್ಲೆ

ವ್ಯಕ್ತಿತ್ವ ವಿಕಸನಕ್ಕೆ ಎನ್​ಎಸ್​ಎಸ್​ ಸಹಕಾರಿ

ಕಲಬುರಗಿ: ವಿದ್ಯರ‍್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವದ ಗುಣ ಬೆಳೆಸುವ ಮೂಲಕ ವ್ಯಕ್ತಿತ್ವ ವಿಕಸನಗೊಳ್ಳುವುದಕ್ಕೆ ರಾಷ್ಟ್ರೀಯ ಸೇವಾ ಯೋಜನೆ (ಎನ್​ಎಸ್​ಎಸ್​) ಸಹಕಾರಿ ಎಂದು ಪತ್ರರ‍್ತ ಶೇಷಗಿರಿ ಹುಣಸಗಿ ಹೇಳಿದರು.

ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಉತ್ತರಾದಿ ಮಠದಲ್ಲಿ ನೂತನ ವಿದ್ಯಾಲಯ ಸಂಸ್ಥೆಯ ಎನ್​.ವಿ. ಕಲಾ, ಶ್ರೀ ಕನ್ಹಯ್ಯಲಾಲ್​ ಮಾಲು ವಿಾನ ಮತ್ತು ಡಾ. ಪಾಂಡುರಂಗರಾವ್​ ಪದಕಿ ವಾಣಿಜ್ಯ ಮಹಾವಿದ್ಯಾಲಯದ ಎನ್​ಎಸ್​ಎಸ್​ ಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಎನ್​ಎಸ್​ಎಸ್​ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜ ಸೇವೆಯ ಬಗ್ಗೆ ಕಾಳಜಿ, ಆಸಕ್ತಿ ಬೆಳೆಯುತ್ತದೆ. ಶಿಸ್ತು, ಸಂಯಮ, ತಾಳ್ಮೆ, ಸಂವಹನ ಕೌಶಲ ಸಿದ್ಧಿಸುತ್ತದೆ. ಹೀಗಾಗಿ ಪ್ರತಿ ವಿದ್ಯರ‍್ಥಿಗೂ ಎನ್​ಎಸ್​ಎಸ್​ ಅಗತ್ಯ ಎಂದರು.

ಎನ್​ವಿ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಪಂ.ಡಾ.ಗುರುಮಧ್ವಾಚರ‍್ಯ ನವಲಿ ಮಾತನಾಡಿ, ಶ್ರೀ ಜಯತರ‍್ಥರ ಮೂಲವೃಂದಾವನ ಸನ್ನಿಧಾನದಲ್ಲಿ ಶಿಬಿರ ನಡೆಯುತ್ತಿರುವುದು ಖುಷಿ ತಂದಿದೆ. ಇಲ್ಲಿನ ಶಿಬಿರದಲ್ಲಿ ಪಾಲ್ಗೊಳ್ಳುವುದೇ ಮಹಾಭಾಗ್ಯ ಎಂದು ತಿಳಿಸಿದರು.

ಪ್ರಾಂಶುಪಾಲ ಡಾ.ದಯಾನಂದ ಶಾಸಿ ಅಧ್ಯತೆ ವಹಿಸಿದ್ದರು. ಮಳಖೇಡ ಉತ್ತರಾದಿ ಮಠದ ನಾರಾಯಣ ದೇಶಪಾಂಡೆ, ಎನ್​ವಿ ಕಾಲೇಜಿನ ನಿವೃತ್ತ ಪ್ರಾಚರ‍್ಯ ಪೊ.ಯು.ಜಿ. ಸರದೇಶಪಾಂಡೆ, ನಿವೃತ್ತ ಪ್ರಾಧ್ಯಾಪಕ ಡಾ.ಗುರುರಾಜ ಚಿಂಚೋಳಿ, ಪ್ರಮುಖರಾದ ಪ್ರೊ.ಗೋವಿಂದ ಆಚರ‍್ಯ ಪೂಜಾರ ಮೋತಕಪಲ್ಲಿ, ರಾಹುಲ್​ ಕಕ್ಕೇರಿ, ಡಾ.ವಿಷ್ಣು ಗುಂಡಗರ‍್ತಿ ಇತರರಿದ್ದರು.

ಕನ್ನಡ ಪ್ರಾಧ್ಯಾಪಕ ಡಾ.ಮಲ್ಲಿನಾಥ ತಳವಾರ ನಿರೂಪಣೆ ಮಾಡಿ ವಂದಿಸಿದರು. ವಿಶೇಷ ಶಿಬಿರ ಮೇ ೧೧ರಂದು ಸಂಪನ್ನಗೊಳ್ಳಲಿದೆ. ಸುಮಾರು ೬೦ಕ್ಕೂ ಹೆಚ್ಚು ವಿದ್ಯರ‍್ಥಿಗಳು ಇದ್ದರು.