ಜಿಲ್ಲೆ

ವ್ಯಕ್ತಿತ್ವ ರೂಪಿಸುವ ಕನಸು ನಮ್ಮಲ್ಲಿ ಇರಲಿ

ಬಸವಕಲ್ಯಾಣ: ಹಸಿವು, ನಿರೀಕ್ಷೆ ಮತ್ತು ಕನಸುಗಾರಿಕೆ ಈ ಮೂರು ಅಂಶಗಳು ಬದುಕಿನ ಬಹುದೊಡ್ಡ ಪ್ರಕ್ರಿಯೆಗಳಾಗಿವೆ. ಇವು ಯಾರನ್ನು ಬಿಟ್ಟಿಲ್ಲ. ಕನಸು ಭವಿಷ್ಯ ಮತ್ತು ಆತ್ಮವಿಶ್ವಾಸದ ಸೂಚಕ ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ನಿರ್ದೇಶಕ ಪ್ರೊ.ಬಸವರಾಜ ಡೋಣುರ ಹೇಳಿದರು.
ನಗರದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಕನಸು ಕಾಣುವುದು ನಿಲ್ಲಿಸಿz್ದೆÃವೆ. ನಮ್ಮ ವ್ಯಕ್ತಿತ್ವ ರೂಪಿಸುವ ಕನಸು ನಮ್ಮಲ್ಲಿ ಇರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಟಾಲ್‌ಸ್ಟಾಯ್, ಓ ಹೆನ್ರಿ, ಶೆಕ್ಸ್ಪಿಯರ್, ಕುವೆಂಪು, ಬೇಂದ್ರೆ, ಕಾರ್ನಾಡ್ ಸೇರಿ ಹಲವರ ಬರಹದ ಮೂಲಕ ಭಾಷೆಯನ್ನು ಬೆಳೆಸಿದ್ದಾರೆ. ಅವರೆಲ್ಲರೂ ಸೇರಿ ಹಸಿವು, ಕನಸು, ಕಾಯುವಿಕೆ ಮತ್ತು ಸಹನೆಯ ಕುರಿತು ಗಾಢವಾಗಿ ಬರೆದಿದ್ದಾರೆ ಎಂದು ತಿಳಿಸಿದರು.
ಪಿಡಿಒ ಪ್ರಭು ಬಿರಾದಾರ ಮಾತನಾಡಿ, ನಮ್ಮ ಜಗತ್ತನ್ನು ಆವರಿಸಿದ ಅನೇಕ ಸೂಕ್ಷ ಜೀವಿಗಳ ಇರುವಿಕೆ, ಅವುಗಳ ಕ್ಷಮತೆ, ಕಾರ್ಯ ನಿರ್ವಹಣೆ ಕುರಿತು ಆಳ ಅಧ್ಯಯನ ಜೈವಿಕ ತಂತ್ರಜ್ಞಾನದಲ್ಲಿ ಸಾಧ್ಯವಿದೆ ಎಂದು ಹೇಳಿದರು.
ಬಿಡಿಪಿಸಿ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬಸವೇಶ್ವರ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥೆ ಶಾಂತಲಾ ಪಾಟೀಲ್, ಪ್ರಮುಖರಾದ ಶ್ರೀನಿವಾಸ ಉಮಾಪುರೆ, ಶಾಂತಲಿಂಗ ಧಬಾಲೆ, ಸಚಿನ್ ಬಿಡವೆ, ವಿವೇಕಾನಂದ ಶಿಂಧೆ, ಅಶೋಕ ರೆಡ್ಡಿ ಪ್ರಶಾಂತ ಬುಡಗೆ ಇತರರಿದ್ದರು.
ಸಂಸ್ಥೆ ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕ್ಕಶೆಟ್ಟಿ ಸ್ವಾಗತಿಸಿದರು. ಡಾ.ಭೀಮಾಶಂಕರ ಬಿರಾದಾರ ವಂದಿಸಿದರು. ಡಾ.ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು.

ಸಾಹಿತ್ಯದಿಂದ ಬದುಕಿನಲ್ಲಿ ನೆಮ್ಮದಿ ಪಡೆಯುತ್ತೇವೆ. ಬೇರಾವ ವಿಷಯಗಳು ಉಂಟುಮಾಡದ ಹೊಸ ಅನುಭವ, ಚಿಂತನೆ ಸಾಹಿತ್ಯದಿಂದ ಸಾಧ್ಯ. ಸಾಹಿತ್ಯದ ಓದು ವಿಶ್ವಾಸ ಹುಟ್ಟಿಸುತ್ತದೆ. ಕನಸು ಕಾಣಲು ಹಚ್ಚುವ ಶಕ್ತಿ ಸಾಹಿತ್ಯಕ್ಕಿದೆ. ಜೀವನ ಅಂದರೆ ಕಾಯುವುದು. ಹಸಿವು, ಕಾಯುವಿಕೆ, ಕನಸಿನ ಸಂದರ್ಭದಲ್ಲಿ ಸಹನೆ ಕ್ರಿಯಾತ್ಮಕವಾಗಿರುತ್ತದೆ. ಸಹನೆ ಇದ್ದರೇನೇ ಏನನ್ನಾದರು ಸಾಧಿಸಲು ಸಾಧ್ಯ.| ಪ್ರೊ. ಬಸವರಾಜ ಡೋಣುರನಿರ್ದೇಶಕ, ಶೈಕ್ಷಣಿಕ ವಿಭಾಗ ಕೇಂದ್ರೀಯ ವಿವಿ ಕಲಬುರಗಿ