ಜಿಲ್ಲೆ

ವ್ಯಕ್ತಿ ಕೊಲೆ,ಬಂಧನ

ಚಿತ್ರದುರ್ಗ:ಕೊಟ್ಟಿದ್ದ ಸಾಲ ಹಿಂತಿರುಗಿಸಲಿಲ್ಲವೆಂದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪಿಯನ್ನು ತುರುವನೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆರೋಪಿ ಚಂದ್ರಣ್ಣ(45)ಎಂದು ಹಾಗೂ ಕೊಲೆಯಾದ ವ್ಯಕ್ತಿಯನ್ನು ಮುದ್ದಾಪುರದ ನಿವಾಸಿ ಬಸವರಾಜಪ್ಪ(63)ಎಂದು ಗುರುತಿಸಲಾಗಿದೆ.
ಮುದ್ದಾಪುರದ ನಿವಾಸಿ ಬಸವರಾಜಪ್ಪ ಅವರು ಡಿ.4ರಿಂದ ಕಾಣೆಯಾಗಿದ್ದಾರೆ ಎಂದು ಡಿ.10ರಂದು ದೂರು ದಾಖಲಿಸಿಕೊಂಡು, ತು ರುವನೂರು ಪೊಲೀಸರು ತನಿಖೆ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಬಸವರಾಜಪ್ಪ ಶವ ಸಿದ್ದವ್ವನದುರ್ಗದಲ್ಲಿ ಜಮೀನೊಂದರಲ್ಲಿ ಪತ್ತೆಯಾಗಿತ್ತು. ಈ ಕುರಿತು ತನಿಖೆ ತೀವ್ರಗೊಳಿಸಿದ ಪೊಲೀಸರು ಆರೋಪಿ ಚಂದ್ರಣ್ಣನನ್ನು ಬಂಧಿಸಿದ್ದಾರೆ. ಒಂದು ಲಕ್ಷ ರೂ.ಅಧಿಕ ಮೊತ್ತದ ಸಾಲವನ್ನು ಹಿಂತಿರುಗಿಸಲಿಲ್ಲವೆಂದು ಬಸವರಾಜ ಪ್ಪನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿ,ಶವವನ್ನು ಹೂತಿಟ್ಟಿದ್ದ ಆರೋಪದಡಿ ಚಂದ್ರಣ್ಣನನ್ನು ತುರುವನೂರು ಸಿಪಿಐ ಲತಾ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ.