ಬೀದರ್: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೀದರ್ ತಾಲೂಕು ಘಟಕಕ್ಕೆ ನೂತನವಾಗಿ ಚುನಾಯಿತರಾದ ಪ್ರತಿನಿಧಿಗಳಿಗೆ ಗುರುವಾರ ಇಲ್ಲಿನ ಶರಣಬಸವೇಶ್ವರ ಅಭ್ಯಾಸಾರ್ಥ ಪ್ರೌಢ ಶಾಲೆಯಲ್ಲಿ ಪ್ರಮಾಣಪತ್ರ ವಿತರಣೆ ಮಾಡಿ ಸನ್ಮಾನಿಸಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಗಂದಗೆ ಮಾತನಾಡಿ, ಎಲ್ಲ ಪ್ರತಿನಿಧಿಗಳು ಪರಸ್ಪರ ವೈಮನಸ್ಸನ್ನು ಮರೆತು ಶಿಕ್ಷಕರ ಅಭಿವೃದ್ಧಿಗೆ ಶ್ರಮಿಸಬೇಕು. ಫಲಿತಾಂಶ ಬಂದ ನಂತರ ಚುನಾವಣೆ ಬಗ್ಗೆ ಚರ್ಚಿಸಿ ಮನಸ್ತಾಪ ಮಾಡಿಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು.
ನೂತನವಾಗಿ ಚುನಾಯಿತರಾದ ಮನೋಹರ ಕಾಶಿ, ಪ್ರಭುಲಿಂಗ ತೂಗಾಂವೆ, ಶಿವರಾಜ ಕಪಲಾಪುರೆ, ರಾಜು ಸಾಗರ, ಬಾಬು ಕುಮಾರ, ಮಹ್ಮದ್ ಇಸೂಫ್, ಮಹೇಶ, ಸುರೇಶ ಟಾಳೆ, ಅಬ್ದುಲ್ ಸತ್ತಾರ್, ಡೇವಿಡ್, ನರಸಪ್ಪ, ಹೈದರಲಿ, ಧರ್ಮಪ್ರಕಾಶ, ಅಶ್ರಫ್ ಅಲಿ, ಮನೋಹರ ಬಾಬಶೆಟ್ಟಿ, ಕಾಶಿನಾಥ, ಸುಮತಿ, ಸಂಪತಿ, ಬೀನಾ ಕಾವಳೆ, ಬುದ್ಧಾದೇವಿ, ರಾಜಮ್ಮಾ, ಸಂಧ್ಯಾರಾಣಿ, ಆಫಿಪ್ಸಲ್ಮಾ, ಸಂಪತ್ಕುಮಾರಿ ಅವರನ್ನು ಸನ್ಮಾನಿಸಿ ಪ್ರಮಾಣ ಪತ್ರ ನೀಡಲಾಯಿತು.
ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಚುನಾವಣಾಧಿಕಾರಿ ಬಾಬುರಾವ ದಾನಿ, ಅಶೋಕ ರೆಡ್ಡಿ, ಶಿವರಾಜ ಕಪಲಾಪುರೆ, ವೈಜಿನಾಥ ಪಾಟೀಲ್ ಇತರರಿದ್ದರು.