ಕೊಡೇಕಲ್: ಗ್ರಾಮ ಹೊರವಲಯದ ಕೃಷ್ಣಾ ಎಡದಂಡೆ ಮುಖ್ಯ ಕಾಲುವೆ ಬಳಿ ಏಳು ಮಕ್ಕಳ ತಾಯಿ(ತಾಯಮ್ಮ) ದೇವಿ ಜಾತ್ರೆ ನಿಮಿತ್ತ ಮಂಗಳವಾರ ಪಲ್ಲಕ್ಕಿ ಉತ್ಸವ ವೈಭದಿಂದ ಜರುಗಿತು. ದೇವಸ್ಥಾನದಲ್ಲಿ ತಾಯಮ್ಮ ದೇವಿ ಮೂರ್ತಿಗೆ ವಿವಿಧ ಅಭಿಷೇಕ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮ ಜರುಗಿದವು. ವಾದ್ಯಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ದೇವಿಗೆ ಪೂಜಾರಿ ಲಕ್ಷ್ಮಣ ವಿಶೇಷ ಅಲಂಕಾರ ಮಾಡಿ ದೈವದ ಸೀರೆ ಅರ್ಪಿಸಿ ಮಹಾ ಮಂಗಳಾರತಿ ಮತ್ತು ನೈವೇದ್ಯ ಸಮರ್ಪಿಸಿದರು. ಜಾತ್ರೆಗೆ ಬೇರೆ ಬೇರೆ ಭಾಗಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿ ಪ್ರಸಾದ ಸ್ವೀಕರಿಸಿದರು.