ಕಲಬುರಗಿ: ಸ್ಟೇಷನ್ ಮುಖ್ಯ ರಸ್ತೆಯ ಕೆಬಿಎನ್ ಆಸ್ಪತ್ರೆ ಎದುರು ಬುಧವಾರ ಹಾಡಹಗಲೆ ವೈದ್ಯೆಯೊಬ್ಬರ ಕೊರಳಲ್ಲಿದ್ದ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಸುಲಿಗೆ ಮಾಡಲಾಗಿದೆ. ಡಾ.ಶಿಲ್ಪಾ ಸರ ಕಳೆದುಕೊಂಡವರು. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಸುಲಿಗೆಕೋರರು ವೈದ್ಯರನ್ನು ಬೆದರಿಸಿ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸ್ಟೇಷನ್ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.