ಬೆಳಗಾವಿ ಕೆಎಲ್​ಇ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ "ಕನ್ನಡ ವೈದ್ಯ ಬರಹಗಾರರ ಐದನೇ ರಾಜ್ಯ ಸಮ್ಮೇಳನದಲ್ಲಿ ಡಾ.ಪ್ರಭಾಕರ ಕೋರೆ, ಡಾ.ನಾ. ಸೋಮೇಶ್ವರ, ಡಾ. ಎಚ್​.ಬಿ. ರಾಜಶೇಖರ, ಡಾ.ವಿ.ಡಿ.ಪಾಟೀಲ, ಡಾ. ನಿತಿನ್​ ಗಂಗಾನೆ, ಡಾ.ಎಂ.ಎಸ್​.ಗಣಾಚಾರಿ, ಡಾ.ಕರುಣಾಕರಣ ಬಿ.ಪಿ., ಡಾ.ವೀಣಾ ಸುಳ್ಯ, ಡಾ.ಎನ್​.ಎಸ್​.ಮಹಾಂತಶೆಟ್ಟಿ ಇತರರಿದ್ದರು. 
ಜಿಲ್ಲೆ

ವೈದ್ಯರು ಏಕೆ ಬರೆಯುತ್ತಿಲ್ಲ?: ಡಾ. ನಾ. ಸೋಮೇಶ್ವರ ಪ್ರಶ್ನೆ

ಬೆಳಗಾವಿ: ಕರ್ನಾಟಕದಲ್ಲಿ 1,41,154 ನೋಂದಾಯಿತ ವೈದ್ಯರಿದ್ದಾರೆ. ಈ ಪೈಕಿ ಕನ್ನಡದಲ್ಲಿ ಬರೆಯಬಲ್ಲ ವೈದ್ಯರು 120. ನಿಯಮಿತವಾಗಿ ಬರೆಯುವವರು 50. ಗಂಭೀರವಾಗಿ ತೆಗೆದುಕೊಂಡವರು 20. ಉಳಿದವರು ಏಕೆ ಬರೆಯುತ್ತಿಲ್ಲ ಎಂದು ಸಮ್ಮೇಳನದ ಸರ್ವಾಧ್ಯಕ್ಷ, ಚಂದನ ವಾಹಿನಿಯ ಥಟ್​ ಅಂಥ ಹೇಳಿ ಸಂಯೋಜಕ ಹಾಗೂ ಖ್ಯಾತ ವೈದ್ಯ ಬರಹಗಾರ ಡಾ. ನಾ. ಸೋಮೇಶ್ವರ ಪ್ರಶ್ನಿಸಿದರು.

ನಗರದ ಕೆಎಲ್​ಇ ಶತಮಾನೋತ್ಸವ ಸಭಾಂಗಣದಲ್ಲಿ ಭಾರತೀಯ ವೈದ್ಯಕಿಯ ಸಂ ಕರ್ನಾಟಕ ಶಾಖೆ& ಕನ್ನಡ ವೈದ್ಯ ಬರಹಗಾರರ ಸಮಿತಿ, ಕೆಎಲ್​ಇ ವಿಶ್ವವಿದ್ಯಾಲಯದ ಜೆಎನ್​ಎಂಸಿ ಕನ್ನಡ ಬಳಗದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ "ಕನ್ನಡ ವೈದ್ಯ ಬರಹಗಾರರ ಐದನೇ ರಾಜ್ಯ ಸಮ್ಮೇಳನ'ದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡದಲ್ಲಿ ಆರೋಗ್ಯ ಸಾಹಿತ್ಯ ಸಂವಹನದ ಸ್ನಾತಕೋತ್ತರ ಡಿಪ್ಲೊಮಾ ನೀಡುವ ವ್ಯವಸ್ಥೆಯಿಲ್ಲ. ರಾಜೀವ್​ ಗಾಂಧಿ ಆರೋಗ್ಯ ವಿವಿ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ವಿರಳವಾದ ಕಾರ್ಯಾಗಾರಗಳನ್ನು ನಡೆಸಿತ್ತು. ಸೂಕ್ತ ಆರೋಗ್ಯ ನಿಂಟು ಬೇಕಾಗಿದೆ. ಆರೋಗ್ಯ ಪುಸ್ತಕವನ್ನು ಬರೆಯುವುದು ಹೇಗೆ ಎನ್ನುವ ಬಗ್ಗೆಯೇ ಒಂದು ಪುಸ್ತಕ ಬರಬೇಕಾಗಿದೆ. ನಮ್ಮಲ್ಲಿ "ಕಂಟಿನ್ಯೂಡ್​ ಮೆಡಿಕಲ್​ ಎಜುಕೇಶನ್​' ಇರುವ ಹಾಗೆ ಜನಪ್ರಿಯ ಆರೋಗ್ಯ ಸಾಹಿತ್ಯದಲ್ಲಿ ವರ್ತಮಾನ ಸಂಶೋಧನೆಗಳ ಆಯ್ದ ಭಾಗಗಳ ಸಾರಾಂಶವು ಸಾರ್ವಜನಿಕರಿಗೆ ದೊರೆಯಬೇಕು. ಭಾರತೀಯ ವೈದ್ಯಕಿಯ ಸಂ, ಕನ್ನಡ ವೈದ್ಯ ಬರಹಗಾರರ ಸಮಿತಿಯು, ಪ್ರಸಾರಾಂಗದ ಜತೆಗೂಡಿ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.

ಬದುಕಿನ ಆರೋಗ್ಯ ಮತ್ತು ಸೌಂದರ್ಯ ಸಮೀಕರಿಸುವ ಶಕ್ತಿ ವೈದ್ಯ ಬರಹಗಾರರಲ್ಲಿ ಇರಬೇಕು. ಕನ್ನಡದಲ್ಲಿ ಆರೋಗ್ಯ ಸಾಹಿತ್ಯ, ಅಧಿಕೃತವಾದಂತಹ ಗ್ರಂಥಗಳ ಕೊರತೆ ಇದೆ. ವೈದ್ಯರೇ ಆರೋಗ್ಯ ಸಾಹಿತ್ಯ ಕುರಿತು ಗ್ರಂಥಗಳನ್ನು ರಚಿಸುವಂತೆ ಆಗಬೇಕು. ಆರೋಗ್ಯ ಸಾಹಿತ್ಯ ಕುರಿತು ಸರ್ಕಾರಿ ವಲಯದಲ್ಲಿ ಯಾವುದೇ ಕೆಲಸ ಕಾರ್ಯಗಳು ಜರುಗುತ್ತಿಲ್ಲ. ಪರಸ್ಪರ ಸಂವಹನವಿಲ್ಲ. ಒಂದೇ ವಿಷಯದ ಬಗ್ಗೆ ಹಲವು ಸಲ ಗ್ರಂಥಗಳು ಪ್ರಕಟವಾಗಿರುವುದನ್ನು ಗಮನಿಸಬಹುದು. ಆರೋಗ್ಯ ಸಾಹಿತ್ಯ ಕುರಿತು ಆದ್ಯತೆ ಕಡಿಮೆಯಾಗಿದೆ ಎಂದರು.

ರಾಜ್ಯದ ಪ್ರತಿಯೊಂದು ವೈದ್ಯಕಿಯ ಕಾಲೇಜುಗಳಲ್ಲಿ ಕನ್ನಡ ಸಂವಿರಬೇಕು. ಅದು ತನ್ನ ಪ್ರಾಸಾರಂಗದ ಮೂಲಕ ಪ್ರಸ್ತುತ ಆರೋಗ್ಯ ವಿಚಾರಗಳ ಗ್ರಂಥಗಳನ್ನು ಪ್ರಕಟಿಸುತ್ತ ಇರಬೇಕು. ವರ್ತಮಾನದ ವೈದ್ಯಕಿಯ ಸಂಶೋಧನೆಗಳನ್ನು ಕೂಡ ದಾಖಲಿಸುವ ಕೆಲಸ ನಡೆಯಬೇಕು. ಈಗಾಗಲೇ ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ವೈದ್ಯಕಿಯ ಕಾಲೇಜುಗಳಲ್ಲಿ ಮಾತೃಭಾಷೆಯಲ್ಲಿ ಬೋಧಿಸುವ ಕಾರ್ಯ ನಡೆದಿದೆ. ಕರ್ನಾಟಕದಲ್ಲಿ ಕೂಡ ವೈದ್ಯಕಿಯ ಶಿಕ್ಷಣ ಪಠ್ಯಪುಸ್ತಕಗಳು ಕನ್ನಡದಲ್ಲಿ ದೊರೆಯುವಂತಾಗಬೇಕು. ಆರೋಗ್ಯ ಪಠ್ಯಪುಸ್ತಕಗಳು ಶಾಲಾ ಮಕ್ಕಳಿಗೆ ಅಳವಡಿಸಬೇಕು. ಆರೋಗ್ಯ ಪತ್ರಿಕೋದ್ಯಮ ಬರಬೇಕು. ಸಮ್ಮೇಳನಗಳಲ್ಲಿ ಆರೋಗ್ಯ ಸಾಹಿತ್ಯ ವಿಮರ್ಶೆ ಜರುಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸಮ್ಮೇಳನಗಳಲ್ಲಿ ಆರೋಗ್ಯ ಗೋಷ್ಠಿ ಆಯೋಜಿಸಬೇಕು ಎಂದರು.

ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಧರ ಕೆ.ಆರ್​ ಮಾತನಾಡಿದರು. ಭಾರತೀಯ ವೈದ್ಯಕಿಯ ಸಂದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ ಎಸ್​. ಅಧ್ಯಯ ನುಡಿಗಳನ್ನಾಡಿದರು. ಡಾ.ಎಚ್​.ಬಿ.ರಾಜಶೇಖರ, ಡಾ.ವಿ.ಡಿ.ಪಾಟೀಲ, ಕಾಹೆರ್​ ಕುಲಪತಿ ಡಾ.ನಿತಿನ್​ ಗಂಗಾನೆ, ಕುಲಸಚಿವ ಡಾ.ಎಂ.ಎಸ್​.ಗಣಾಚಾರಿ, ಡಾ.ಕರುಣಾಕರಣ ಬಿ.ಪಿ., ಡಾ.ವೀಣಾ ಸುಳ್ಯ, ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಜೆಎನ್​ಎಂಸಿ ಪ್ರಾಚಾರ್ಯ ಡಾ.ಎನ್​.ಎಸ್​.ಮಹಾಂತಶೆಟ್ಟಿ, ಡಾ.ರವೀಂದ್ರ ಅನಿಗೋಳ ಇದ್ದರು. ಡಾ.ಅವಿನಾಶ ಕವಿ ಸ್ವಾಗತಿಸಿದರು. ಡಾ.ಸುಶ್ರೂತ ಕಾಮೋಜಿ ಪ್ರಮಾಣವಚನ ಬೋಧಿಸಿದರು. ಡಾ. ಷಮಾ ಬೆಲ್ಲದ, ಡಾ.ನೇತ್ರಾವತಿ ಕವಿ ನಿರೂಪಿಸಿದರು.

9 ಗ್ರಂಥಗಳ ಲೋಕಾರ್ಪಣೆ
ವೈದ್ಯಸಂಗಮ ಸ್ಮರಣ ಸಂಚಿಕೆ ಹಾಗೂ 9 ವೈದ್ಯಕಿಯ ಗ್ರಂಥಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. 2023&24ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿಯನ್ನು ಡಾ.ಸುರೇಶ ಸಗರದ, ಡಾ.ಸುನಂದಾ ಆರ್​. ಕುಲಕರ್ಣಿ ಅವರಿಗೆ, ಹಸ್ತಪ್ರತಿ ಪ್ರಶಸ್ತಿಯನ್ನು ಡಾ.ವೀಣಾ ಎಸ್​.ಭಟ್​, ಡಾ.ದಿವ್ಯಾ ಕೆ.ಎನ್​., ಡಾ. ರಣಜಿತ ಬೀರಣ್ಣ ನಾಯ್ಕ ಕೆಂಚನ್​, ಡಾ.ಸಲೀಮ್​ ನದಾಫ್​ ಅವರಿಗೆ ಪ್ರದಾನ ಮಾಡಲಾಯಿತು.

ವರ್ಷದೊಳಗೆ ಕನ್ನಡ ಭವನ ನಿರ್ಮಾಣ
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಜವಾರಲಾಲ್​ ನೆಹರು ವೈದ್ಯಕಿಯ ಕಾಲೇಜಿನ ಕನ್ನಡ ಬಳಗ ಬೆಳಗಾವಿಯ ಪರಿಸರದಲ್ಲಿ ಕನ್ನಡ ಕಟ್ಟುವ, ಬೆಳೆಸುವ ಕಾರ್ಯ ಮಾಡುತ್ತ ಬಂದಿದೆ. ಗಡಿಭಾಗದಲ್ಲಿ ಅದರ ಕೊಡುಗೆ ಅನನ್ಯ, ಅವಿಸ್ಮರಣೀಯ. ಖ್ಯಾತ ಸಾಹಿತಿಗಳನ್ನು ಬೆಳಗಾವಿಗೆ ಕರೆ ತಂದ ಹೆಗ್ಗಳಿಕೆ ಕನ್ನಡ ಬಳಗಕ್ಕಿದೆ. ಬೆಳಗಾವಿಯಲ್ಲಿ ಒಂದು ಸಂದರ್ಭದಲ್ಲಿ ಕನ್ನಡದಲ್ಲಿ ಉಸಿರಾಡುವುದು ಕಷ್ಟವಾಗಿತ್ತು. ಅಂತಹ ಳಿಗೆಯಲ್ಲಿ ರಾಜ್ಯೋತ್ಸವದ ಮೆರವಣಿಗೆಗಳನ್ನು ಸಂಟಿಸಿ ಕನ್ನಡ ಧ್ವನಿಯಾಗಿದ್ದು ಕನ್ನಡ ಬಳಗ. ಅದರ ರಚನಾತ್ಮಕ ಕೆಲಸಗಳು ದಾಖಲಾರ್ಹವೆನಿಸಿವೆ. ಅದರ ವಜ್ರಮಹೋತ್ಸವ ಸಂಭ್ರಮಾಚರಣೆ ಅಭಿಮಾನ ಮೂಡಿಸಿದೆ ಎಂದರು. ಇಂತಹ ವೈದ್ಯಕಿಯ ಬರಹಗಾರರ ಸಮ್ಮೇಳನವು ನಮ್ಮ ಸಂಸ್ಥೆಯಲ್ಲಿ ಸಂಟಿಸಿರುವುದು ಅಭಿಮಾನ ತಂದಿದೆ. ಮುಂಬರುವ ಒಂದು ವರ್ಷದ ಒಳಗಾಗಿ ಇಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದೆಂದು ಘೋಷಿಸಿದರು.